ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಕೇವಲ 94 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ ಒಟ್ಟು 122 ರನ್ ಬಾರಿಸಿ ಹಲವು ದಾಖಲೆ ಸೃಷ್ಟಿಸಿದರು.

12 September 2023

Pic credit - Google

ಈ ಶತಕದೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್‌ ಪೂರೈಸಿದ್ದು, ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

12 September 2023

ಜಯಸೂರ್ಯ ಅವರು 416 ಇನ್ನಿಂಗ್ಸ್‌ಗಳಲ್ಲಿ 13000 ಏಕದಿನ ರನ್‌ಗಳನ್ನು ಪೂರೈಸಿದ್ದರು

ಸನತ್ ಜಯಸೂರ್ಯ (ಶ್ರೀಲಂಕಾ)

ಶ್ರೀಲಂಕಾದ ದಿಗ್ಗಜ ಈ ಕ್ರಿಕೆಟಿಗ 363 ಇನ್ನಿಂಗ್ಸ್‌ಗಳಲ್ಲಿ 13000 ಏಕದಿನ ರನ್‌ಗಳ ಮೈಲಿಗಲ್ಲನ್ನು ತಲುಪಿದ್ದರು

ಕುಮಾರ ಸಂಗಕ್ಕಾರ (ಶ್ರೀಲಂಕಾ)

ಪಾಂಟಿಂಗ್ 341 ಇನ್ನಿಂಗ್ಸ್‌ಗಳಲ್ಲಿ 50 ಓವರ್‌ಗಳ ಸ್ವರೂಪದಲ್ಲಿ 13000 ರನ್‌ಗಳನ್ನು ಪೂರೈಸಿದ್ದರು.

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)

ಸಚಿನ್ ತೆಂಡೂಲ್ಕರ್ 321 ಏಕದಿನ ಇನ್ನಿಂಗ್ಸ್‌ಗಳಲ್ಲಿ 13000 ರನ್‌ಗಳ ಮೈಲಿಗಲ್ಲನ್ನು ತಲುಪಿದರು.

ಸಚಿನ್ ತೆಂಡೂಲ್ಕರ್ (ಭಾರತ)

ಕೊಹ್ಲಿ ತಮ್ಮ 47ನೇ ಏಕದಿನ ಶತಕದೊಂದಿಗೆ ಕೇವಲ 267 ಇನ್ನಿಂಗ್ಸ್‌ಗಳಲ್ಲಿ 13000 ರನ್ ಮೈಲುಗಲ್ಲನ್ನು ತಲುಪಿದ್ದಾರೆ.

ವಿರಾಟ್ ಕೊಹ್ಲಿ (ಭಾರತ)