ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ: ಇಂಟರೆಸ್ಟಿಂಗ್ ಅಂಕಿಅಂಶ ಇಲ್ಲಿದೆ

16 Mar 2024

Author: Kiran Hanumant Madr

 ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಇಂದು(ಮಾ.16) ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದೆ.

ದೇಶದಲ್ಲಿನ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ದೇಶಾಧ್ಯಂತ 97ಕೋಟಿ ಮತದಾರರಿದ್ದು, 49.7 ಕೋಟಿ ಪುರುಷ, 47.1ಕೋಟಿ ಮಹಿಳಾ, 1.8 ಕೋಟಿ ಮೊದಲ ಮತದಾರರು, 48 ಸಾವಿರ ತೃತೀಯ ಲಿಂಗಿ, 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು, 19.74 ಕೋಟಿ ಯುವ ಮತದಾರರು ಇದ್ದಾರೆ.

ದೇಶದಲ್ಲಿ 10.5 ಲಕ್ಷ ಮತದಾನ ಕೇಂದ್ರಗಳು, ಒಂದುವರೆ ಕೋಟಿ ಚುನಾವಣಾ ಸಿಬ್ಬಂದಿ, 55 ಲಕ್ಷ ಇವಿಎಂ ಮಿಷಿನ್ ಜೊತೆಗೆ ಚುನಾವಣೆಗೆ ನಾಲ್ಕು ಲಕ್ಷ ವಾಹನಗಳನ್ನು ಆಯೋಗ ಬಳಸಲಿದೆ.

85 ವರ್ಷ ಮೇಲ್ಪಟ್ಟವರಿಗೆ ಮತ್ತು 40% ಪ್ರತಿಶತಕ್ಕಿಂತ ಹೆಚ್ಚು ಅಂಗವಿಕಲರಿಗೂ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆಪ್ ಮೂಲಕ ತಮ್ಮ ಅಭ್ಯರ್ಥಿಗಳ ಮಾಹಿತಿ ಜೊತೆಗೆ ಅಭ್ಯರ್ಥಿಗಳ ಅಪರಾಧ ಕೇಸ್​ಗಳು ಆ್ಯಪ್​ನಲ್ಲಿ ಲಭ್ಯವಾಗಲಿದೆ. ಚುನಾವಣಾ ಅಕ್ರಮಗಳನ್ನು ಮತದಾರ ಬಯಲು ಮಾಡಬಹುದು.

ಚುನಾವಣೆಯಲ್ಲಿ ಹಿಂಸೆ ನಡೆಯದಂತೆ ಎಲ್ಲಾ ಕಡೆ ಚೆಕ್ ಪೋಸ್ಟ್ ಇರಲಿವೆ. ಡ್ರೋಣ್ ಮೂಲಕ ಕಣ್ಗಾವಲು ಇಟ್ಟಿದ್ದು, 24 ಗಂಟೆಗಳ ಕಂಟ್ರೋಲ್ ರೂಂ ಇರಲಿದೆ.

ಎಲ್ಲಾ ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಯಲಿದೆ. ಹೆಲಿಕಾಪ್ಟರ್, ಖಾಸಗಿ ವಿಮಾನಗಳನ್ನು ತಪಾಸಣೆ ಮಾಡಲಾಗುತ್ತದೆ.

 ಫೇಕ್ ಸುದ್ದಿಗಳ ಮೇಲೂ ನಿಗಾ ಇಡಲಾಗಿದ್ದು, ಅಭ್ಯರ್ಥಿಗಳನ್ನು ಬಗ್ಗೆ ಮಾತನಾಡಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ.

ಒರಿ ಜೊತೆ ಪೋಸ್​ ನೀಡೋದು ಎಂದರೆ ಈ ಸೆಲೆಬ್ರಿಟಿಗಳಿಗೆ ಸಿಕ್ಕಾಪಟ್ಟೆ ಖುಷಿ.