ಹನುಮಂತನ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ
ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ.
ವಾಯು ದೇವನು ಹನುಮಂತನ ಜನನದಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ವಾಯುಪುತ್ರ ಎಂದೂ ಕೂಡ ಕರೆಯಲಾಗುತ್ತದೆ.
ಸಂಸ್ಕೃತದಲ್ಲಿ ಹನುಮಾನ್ ಎಂದರೆ ವಿರೂಪಗೊಂಡ ದವಡೆ ಎಂದರ್ಥ.
ಶ್ರೀರಾಮನ ಧೀಘಾಯುಷ್ಯಕ್ಕಾಗಿ ಮೈಯೆಲ್ಲಾ ಕೇಸರಿ ಸಿಂಧೂರವನ್ನು ಹಚ್ಚಿದ್ದರಿಂದ ಇಂದಿಗೂ ಕೂಡ ಹನುಮಂತನ ವಿಗ್ರಹವನ್ನು ಸಿಂಧೂರದಿಂದ ಅಲಂಕರಿಸಲಾಗುತ್ತದೆ.
ಹನುಮಂತನ ಸಾವು ಅವರ ಸ್ವ ಇಚ್ಛೆಯಿಂದ ಮಾತ್ರ ಸಂಭವಿಸಲು ಸಾಧ್ಯ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಹನುಮಾನ್ ಬ್ರಹ್ಮಚಾರಿಯಾಗಿದ್ದರೂ ಕೂಡ ಆತನಿಗೆ ಮಕರಧ್ವಜ ಎನ್ನುವ ಮಗನಿದ್ದಾನೆ.