'ಕಾಂತಾರ' ಸಿನಿಮಾ ಎಫೆಕ್ಟ್

ಕೋಲ ವೀಕ್ಷಣೆಗೆ ಆಗಮಿಸಿದ                  ವಿದ್ಯಾರ್ಥಿಗಳ ದಂಡು

ಮಂಗಳೂರು ಹೊರವಲಯದ ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ನೇಮೋತ್ಸವ ನಡೆಯಿತು.

ದೇವಸ್ಥಾನದ ಸಮೀಪದಲ್ಲಿರುವ ಎನ್‌ಐಟಿಕೆ ತಾಂತ್ರಿಕ ವಿದ್ಯಾಲಯಕ್ಕೆ ದೇಶ, ವಿದೇಶದ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ಕಾಂತಾರ ಸಿನಿಮಾದಿಂದ ಪ್ರಭಾವಗೊಂಡ ಎನ್‌ಐಟಿಕೆ ವಿದ್ಯಾರ್ಥಿಗಳ ದಂಡು ಕೋಲ ವೀಕ್ಷಣೆಗೆ ಆಗಮಿಸಿತು.

ದೇವಸ್ಥಾನದಲ್ಲಿರುವ ದೈವಗಳ ದೇವರ ಭೇಟಿ ಕಾರ್ಯಕ್ರಮ ಜಾತ್ರೆ ಸಂದರ್ಭದಲ್ಲಿ ನಡೆಯುತ್ತದೆ. ವಿದ್ಯಾರ್ಥಿಗಳು ಸಾಲುಗಟ್ಟಿ ಕ್ಷೇತ್ರದ ನೇಮಕ್ಕೆ ಆಗಮಿಸಿ ಕೋಲ ವೀಕ್ಷಿಸಿದರು.

ನೇಮೋತ್ಸವಕ್ಕೆ ಆಗಮಸಿದ ವಿದ್ಯಾರ್ಥಿಗಳು ಒಂದಿಷ್ಟು ಫೋಟೋ, ವೀಡಿಯೋ ಮಾಡಿಕೊಂಡರು.

ದೈವಗಳ ಹಾವ ಭಾವ ಕಂಡು ಭಕ್ತಿಯಿಂದ ನೇಮ ವೀಕ್ಷಿಸಿದ ನೂರಾರು ವಿದ್ಯಾರ್ಥಿಗಳು ದೈವದ ಕೃಪೆಗೆ ಪಾತ್ರರಾದರು.

ಬೇರೆ ಭಾಗದ ವಿದ್ಯಾರ್ಥಿಗಳಿಗೆ ನೇಮದ ರೀತಿ ರಿವಾಜನ್ನು ಸ್ಥಳೀಯ ವಿದ್ಯಾರ್ಥಿಗಳು ವಿವರಿಸಿದರು.