2022ರ ಅಕ್ಟೋಬರ್-ಡಿಸೆಂಬರ್​ ಅವಧಿಯಲ್ಲಿ ಮಾರುತಿ ಸುಜುಕಿ ನಿವ್ವಳ ಲಾಭ ಶೇ 132ರಷ್ಟು ಹೆಚ್ಚಾಗಿದೆ.

ಮೂರನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ 2,351 ಕೋಟಿ ರೂ. ಲಾಭ ಗಳಿಸಿದೆ.

ಆದಾಯದ ಪ್ರಮಾಣ ಶೇ 25ರಷ್ಟು ಹೆಚ್ಚಾಗಿದ್ದು, 29,044 ಕೋಟಿ ರೂ. ಆಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ಆದಾಯ 23,246 ಕೋಟಿ ರೂ. ಆಗಿತ್ತು.

ಮೂರನೇ ತ್ರೈಮಾಸಿಕದಲ್ಲಿ ಕಂಪನಿ ಒಟ್ಟು 4,65,911 ಕಾರುಗಳ ಮಾರಾಟ ಮಾಡಿತ್ತು.

4,03,929 ಕಾರುಗಳು ದೇಶದಲ್ಲಿ ಮಾರಾಟವಾಗಿದ್ದರೆ 61,982 ಕಾರುಗಳನ್ನು ರಫ್ತು ಮಾಡಲಾಗಿತ್ತು.

ಎಲೆಕ್ಟ್ರಾನಿಕ್ ವಸ್ತುಗಳ ಕೊರತೆಯಿಂದಾಗಿ ಈ ವರ್ಷ ಕಾರುಗಳ ಉತ್ಪಾದನೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿತ್ತು ಎಂದು ಕಂಪನಿ ತಿಳಿಸಿದೆ.