ಮನೆಯ ಕನ್ನಡಿಯನ್ನು ಯಾವುದೇ ಕಲೆ ಇಲ್ಲದೆ ಶುಚಿಯಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಕನ್ನಡಿಯನ್ನು ಎಷ್ಟೇ ಕ್ಲೀನ್ ಮಾಡಿದರೂ ಕೂಡ ಮತ್ತೆ ಮತ್ತೆ ಕಲೆಗಳು, ಗೆರೆಗಳನ್ನು ಕಾಣಬಹುದು.
ಕನ್ನಡಿಯನ್ನು ಶುಚಿಗೊಳಿಸಲು ಸರಿಯಾದ ಬಟ್ಟೆಯನ್ನು ಆಯ್ಕೆ ಮಾಡಿ. ಕಾಟನ್ ಬಟ್ಟೆಗಳು ಸೂಕ್ತವಾಗಿದೆ.
ನಿಮ್ಮ ಸ್ನಾನ ಅಥವಾ ಮುಖ ತೊಳೆದ ನಂತರ ಕನ್ನಡಿ ನೀರಿನ ಹನಿ ಇದ್ದರೆ ಅದನ್ನು ಬಟ್ಟೆಯಲ್ಲಿ ಒರೆಸಿ ಶುಚಿಗೊಳಿಸಿ.
ಪ್ರತೀ ಸಲ ಕನ್ನಡಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ. ಇಲ್ಲದಿದ್ದರೆ ನೀರಿನ ಹನಿಗಳೇ ಒಣಗಿ ಕಲೆಗಳಾಗಿ ಉಳಿದು ಬಿಡುತ್ತದೆ.
ಆಗಾಗ ಕನ್ನಡಿಗಳನ್ನು ಹೋಗಿ ಮುಟ್ಟುವ ಅಭ್ಯಾಸ ಇದ್ದರೇ ಈ ಕೂಡಲೇ ಬಿಟ್ಟು ಬಿಡಿ. ನಿಮ್ಮ ಕೈಗಳ ಅಚ್ಚು ಕಲೆಯಾಗಿ ಉಳಿದು ಬಿಡುತ್ತದೆ.
ಹೆಚ್ಚಿನ ಕೆಮಿಕಲ್ ಕ್ಲೀನರ್ ಬಳಸುವ ಬದಲಾಗಿ ವಿನೆಗರ್ ಹಾಗೂ ನೀರಿನ ಮಿಶ್ರಣವನ್ನು ಮಿರರ್ ಕ್ಲೀನರ್ ಆಗಿ ಬಳಸಿ.