ಮಳೆಗಾಲದಲ್ಲಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡುವ ಅಭ್ಯಾಸಗಳಿವು

ಮಳೆಗಾಲದ ತಂಪಿನ ವಾತಾವರಣ ಹಿತವಾದ ಅನುಭವವನ್ನು ನೀಡುತ್ತದೆ. 

ಆದರೆ ಮಳೆಗಾಲದಲ್ಲಿ ಶೀತ, ಜ್ವರದಂತಹ ಸೋಂಕುಗಳು ಹೆಚ್ಚಾಗಿ ಹರಡುತ್ತದೆ. 

ಆದ್ದರಿಂದ ಮಳೆಗಾಲದಲ್ಲಿ ನಿಮ್ಮನ್ನು ಕಾಪಾಡಲು ಈ ಅಭ್ಯಾಸಗಳಿಂದ ದೂರವಿರಿ. 

ಬೀದಿ ಆಹಾರಗಳನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಿ. 

ಬೀದಿ ಆಹಾರಗಳು ಹೊಟ್ಟೆ ನೋವು, ಉಬ್ಬುವಿಕೆ ಮುಂತಾದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸುವುದನ್ನು ಆದಷ್ಟು ತಪ್ಪಿಸಿ. ಇದು ಚರ್ಮದ ತುರಿಕೆ ಮುಂತಾದ ಸಮಸ್ಯೆಗೆ ಕಾರಣವಾಗಬಹುದು. 

ಮನೆಯಲ್ಲಿ ಸೊಳ್ಳೆ ನಿವಾರಕಗಳನ್ನು ಬಳಸಿ.

ಹೊರಗಡೆಯಿಂದ ಬಂದ ಕೂಡಲೇ ಬಿಸಿ ನೀರಿನಿಂದ ಕೈ ಕಾಲು ತೊಳೆಯಿರಿ. 

ಮಳೆಯಲ್ಲಿ ನೆನೆಯುವ ಅಭ್ಯಾಸ ಬಿಟ್ಟು ಬಿಡಿ. ಮಳೆ ನೀರು ಸೋಂಕಿಗೆ ಕಾರಣವಾಗಬಹುದು.