ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಧಿಕ ವೈಯಕ್ತಿಕ ಚಿನ್ನದ ಪದಕ ಗೆದ್ದ ಅಥ್ಲೀಟ್ ಯಾರು ಗೊತ್ತಾ?
11 August 2024
Pic credit: Google
ಪೃಥ್ವಿ ಶಂಕರ
Pic credit: Google
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅಮೆರಿಕ ಮತ್ತು ಚೀನಾ ಹೊರತುಪಡಿಸಿ ಆಸ್ಟ್ರೇಲಿಯಾದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲುವಲ್ಲಿ ಮುಂಚೂಣಿಯಲ್ಲಿದ್ದರು.
Pic credit: Google
ಇನ್ನು ವೈಯಕ್ತಿಕ ಈಜು ಸ್ಪರ್ಧೆಯಲ್ಲಿ ಫ್ರೆಂಚ್ ಅಥ್ಲೀಟ್ ಲಿಯಾನ್ ಮಾರ್ಚಂಡ್ ಒಟ್ಟು 4 ಚಿನ್ನದ ಪದಕಗಳನ್ನು ಗೆದ್ದಿದ್ದು, ಈ ಬಾರಿ ಅಧಿಕ ಚಿನ್ನದ ಪದಕ ಗೆದ್ದ ಅಥ್ಲೀಟ್ ಎಂಬ ದಾಖಲೆ ಬರೆದಿದ್ದಾರೆ.
Pic credit: Google
22 ವರ್ಷದ ಲಿಯಾನ್ ಮಾರ್ಚಂಡ್ ಕೇವಲ 2 ಗಂಟೆಗಳ ಅವಧಿಯಲ್ಲಿ 2 ಚಿನ್ನದ ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ದಾಖಲೆಯನ್ನು ನಿರ್ಮಿಸಿದರು.
Pic credit: Google
ಇವರಲ್ಲದೆ, ವೈಯಕ್ತಿಕ ಸ್ಪರ್ಧೆಗಳಲ್ಲಿ ತಲಾ 3 ಚಿನ್ನದ ಪದಕಗಳನ್ನು ಗೆದ್ದ ಅನೇಕ ಕ್ರೀಡಾಪಟುಗಳು ಎರಡನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ ಯುಎಸ್‌ಎಯ ಟೋರಿ ಹಸ್ಕೆ, ಸಿಮೋನ್ ಬೈಲ್ಸ್ ಮತ್ತು ಗ್ಯಾಬಿ ಥಾಮಸ್, ಆಸ್ಟ್ರೇಲಿಯಾದ ಮೊಲ್ಲಿ ಒ'ಕಲ್ಲಾಘನ್ ಸೇರಿದ್ದಾರೆ.
Pic credit: Google
ಇನ್ನು ಒಂದೇ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಮೈಕೆಲ್ ಫೆಲ್ಪ್ಸ್ ಹೆಸರಿನಲ್ಲಿದೆ. ಅವರು 2008 ರ ಒಲಿಂಪಿಕ್ಸ್‌ನಲ್ಲಿ ಒಟ್ಟು 8 ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದಿದ್ದರು.
Pic credit: Google
ಒಂದು ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆ ಇಬ್ಬರು ಕ್ರೀಡಾಪಟುಗಳ ಹೆಸರಿನಲ್ಲಿದೆ, ಅದರಲ್ಲಿ ಮೊದಲನೆಯದು ರಷ್ಯಾದ ಜಿಮ್ನಾಸ್ಟ್ ಅಥ್ಲೀಟ್ ಅಲೆಕ್ಸಾಂಡರ್ ಡೆಟಿಯಾಟಿನ್.
Pic credit: Google
ಅಲೆಕ್ಸಾಂಡರ್ ಡೆಟಿಯಾಟಿನ್ 1980 ರ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಒಳಗೊಂಡಂತೆ 8 ಪದಕಗಳನ್ನು ಗೆದ್ದಿದ್ದಾರೆ.
Pic credit: Google
ಇದರ ನಂತರ, ಮೈಕೆಲ್ ಫೆಲ್ಪ್ಸ್ ಈ ಸಾಧನೆಯನ್ನು ಎರಡು ಬಾರಿ ಮಾಡಿದ್ದು, ಇದರಲ್ಲಿ ಅವರು 2004 ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 6 ಚಿನ್ನ ಮತ್ತು 2 ಕಂಚಿನ ಪದಕಗಳನ್ನು ಗೆದ್ದರೆ, ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳನ್ನು ಗೆದ್ದಿದ್ದರು.