ಇನ್ಮುಂದೆ ರಶ್ಮಿಕಾ ಮಂದಣ್ಣ ಅಲ್ಲ ನ್ಯಾಷನಲ್​​​ ಕ್ರಶ್, ಮತ್ಯಾರು ಗೊತ್ತಾ?

ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಷನಲ್​ ಕ್ರಶ್ ಟ್ರೆಂಡಿಂಗ್‌ನಲ್ಲಿ ಟಾಲಿವುಡ್​​​ ಬೆಡಗಿಯ ಹೆಸರು ಭಾರೀ ಸದ್ದು ಮಾಡುತ್ತಿದೆ.

ನ್ಯಾಷನಲ್​​​ ಕ್ರಶ್​​​ ಎಂದಾಕ್ಷಣ ಮೊದಲು ಹೆಸರು ಕೇಳಿ ಬರುವುದೇ ನಟಿ ರಶ್ಮಿಕಾ ಮಂದಣ್ಣ ಅವರದ್ದು.

ಹೌದು ನಟಿ ರಶ್ಮಿಕಾ ಅಷ್ಟರ ಮಟ್ಟಿಗೆ ಬಹುಭಾಷೆಗಳಲ್ಲಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಆದರೆ ಇದೀಗಾ ನ್ಯಾಷನಲ್ ಕ್ರಶ್ ಎಂದಾಕ್ಷಣ ನಟಿ ಮೃಣಾಲ್ ಠಾಕೂರ್ ಅವರ ಹೆಸರು ಕೇಳಿಬರುತ್ತಿದೆ.

ನಟಿ ಮೃಣಾಲ್​ ​ಠಾಕೂರ್ ಸೀತಾ ರಾಮಂ ಸಿನಿಮಾದಲ್ಲಿನ ತನ್ನ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 

ನಟಿ ಮೃಣಾಲ್ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಇದೀಗಾ ನಟಿ ಮೃಣಾಲ್ ಠಾಕೂರ್ ಅಂದ ಚೆಂದಕೆ ನ್ಯಾಷನಲ್‌ ಕ್ರಶ್‌ ಎಂದು ಲಕ್ಷಾಂತರ ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.