ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾರಿಗೆ ಗೊತ್ತಿಲ್ಲ? ಕ್ರಿಕೆಟ್‌ನಲ್ಲಿ ಭಾರತಕ್ಕೆ ಎರಡು ಬಾರಿ ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕೂಲ್ಗೆ ಇಡೀ ವಿಶ್ವದಲೇ ಅಪಾರ ಅಭಿಮಾನಿಗಳಿದ್ದಾರೆ.
Pic credit: Google
2007 ರಲ್ಲಿ ತಮ್ಮ ಚೊಚ್ಚಲ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ, ಆ ನಂತರ 2011 ರಲ್ಲಿ ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Pic credit: Google
2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಧೋನಿ ಪ್ರಸ್ತುತ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ತಂಡವನ್ನು ಎರಡೆರಡು ವಿಶ್ವಕಪ್ನಲ್ಲಿ ಮುನ್ನಡೆಸಿದ ಧೋನಿಗೆ ಭಾರತೀಯ ಸೇನೆಯಲ್ಲಿ ಮಹತ್ವದ ಹುದ್ದೆ ನೀಡಲಾಗಿದೆ.
Pic credit: Google
ಭಾರತೀಯ ಸೇನೆಯಲ್ಲಿ ಧೋನಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಲಾಗಿದೆ. ಇದರ ಸಲುವಾಗಿ ಧೋನಿ ಕಾಶ್ಮೀರದಲ್ಲಿ ತರಬೇತಿಯನ್ನು ಸಹ ಪಡೆದಿದ್ದಾರೆ.
Pic credit: Google
ವಾಸ್ತವವಾಗಿ, ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಅವರ ವೇತನವು 1 ಲಕ್ಷ 21 ಸಾವಿರದಿಂದ 2 ಲಕ್ಷದ 12 ಸಾವಿರದವರೆಗೆ ಇರುತ್ತದೆ.
Pic credit: Google
ಹೀಗಾಗಿ ಪ್ರಸ್ತುತ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಕೂಡ ಇದೇ ಸಂಭಾವನೆಯನ್ನು ಪಡೆಯಲಿದ್ದಾರೆ.
Pic credit: Google
ಧೋನಿ ತಮ್ಮ ಬಾಲ್ಯದಲ್ಲಿ ಸೈನ್ಯಕ್ಕೆ ಸೇರುವ ಕನಸು ಕಂಡಿದ್ದರು. ಅದರಂತೆ ಆ ಕನಸು 2011 ರಲ್ಲಿ ಈಡೇರಿತು ಎಂದು ಸ್ವತಃ ಧೋನಿ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು.