ನಟಿ ಸಮಂತಾ ರುತ್ ಪ್ರಭು ತನಗೆ ಮಯೋಸೈಟಿಸ್ ಎಂಬ ಅಪರೂಪದ ಕಾಯಿಲೆ ಇರುವುದಾಗಿ ಬಹಿರಂಗಪಡಿಸಿದ್ದರು.
ನಟಿ ಇದೀಗಾ ಮಯೋಸೈಟಿಸ್ ಕಾಯಿಲೆ ಲಕ್ಷಣಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆಲಸ್ಯ: ಹಲವು ದಿನಗಳಲ್ಲಿ ಹಾಸಿಗೆಯಿಂದ ಎದ್ದೇಳಲು ಕಷ್ಟ ಪಡುತ್ತಿದ್ದೆ ಎಂದು ನಟಿ ಹೇಳಿಕೊಂಡಿದ್ದಾರೆ.
ದೌರ್ಬಲ್ಯ: ತನ್ನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದಂತೆ ಸ್ನಾಯು ದೌರ್ಬಲ್ಯ ಮತ್ತು ಕೀಲು ನೋವು ಕಾಣಿಸಿಕೊಂಡಿದ್ದವು ಎಂದು ಹೇಳಿಕೊಂಡಿದ್ದಾರೆ.
ಮೈಗ್ರೇನ್: ನನಗೆ ತೀವ್ರವಾದ ಮೈಗ್ರೇನ್ ಸಮಸ್ಯೆ ಇದೆ, ಈಗಲೂ ಕೂಡ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಒಂದು ದಿನ ನಾನು ದಪ್ಪಗಾಗಿ ಕಾಣುತ್ತೇನೆ, ನನ್ನ ದೇಹದ ಮೇಲೆ ನನಗೆ ನಿಯಂತ್ರಣವಿಲ್ಲ ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕಣ್ಣುಗಳಲ್ಲಿ ತೀಕ್ಷ್ಣವಾದ ನೋವು: ಕಣ್ಣಿಗೆ ಸೂಜಿಯಿಂದ ಚುಚ್ಚಿದಂತಹ ಅನುಭವವಾಗುತ್ತದೆ ಎಂದು ಬಹಿರಂಗಪಡಿಸಿದ್ದರು.