ಚಳಿಗಾಲದಲ್ಲಿ ಆರೋಗ್ಯಕರ ಉಗುರುಗಳಿಗಾಗಿ ಈ ಸಲಹೆಗಳನ್ನು ನಿಮ್ಮ ದೈನಂದಿನ ಜೀವನ ಕ್ರಮದಲ್ಲಿ ರೂಡಿಸಿಕೊಳ್ಳಿ.

ಉಗುರುಗಳು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಉಗುರುಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅಗತ್ಯ.

ಚಳಿಗಾಲದಲ್ಲಿ ನಿಮ್ಮ ಉಗುರುಗಳ ಆರೋಗ್ಯವನ್ನು ಕಾಪಾಡಲು ಬಾದಾಮಿ ಅಥವಾ ತೆಂಗಿನ ಎಣ್ಣೆಯಿಂದ ಉಗುರುಗಳಿಗೆ ಮಾಯ್ಚಿರೈಸ್ ಮಾಡುವುದು ತುಂಬಾ ಅಗತ್ಯ. 

ನಿಮ್ಮ ಉಗುರುಗಳಿಗೆ ಯಾವಾಗಲೂ ಬೇಸ್ ಕೋಟ್ ಹಚ್ಚಿ. ಇದು ನಿಮ್ಮ ಉಗುರನ್ನು ಧೂಳು, ಕೊಳಕು ಮತ್ತು ಮಾಲಿನ್ಯಗಳಿಂದ ರಕ್ಷಿಸುತ್ತದೆ. 

ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿಸಲು ಅಡಿಗೆ ಸೋಡಾ ಅಥವಾ ಮೊಟ್ಟೆ, ಜೇನುತುಪ್ಪ ಮತ್ತು ನಿಂಬೆಯನ್ನು ಸೇರಿಸಿ ನೇಲ್ ಪ್ಯಾಕ್​ ತಯಾರಿಸಿ.

ನಿಮ್ಮ ಉಗುರುಗಳನ್ನು ನೀರಿನಿಂದ ಸಾಧ್ಯವಾದಷ್ಟು ದೂರವಿಡಿ. ಸ್ನಾನ ಮಾಡುವಾಗ ಅಥವಾ ಪಾತ್ರೆಗಳನ್ನು ತೊಳೆಯುವಾಗ ಹ್ಯಾಂಡ್ ಗ್ಲೌಸ್ ಧರಿಸಿ.

ಚಳಿಗಾಲದಲ್ಲಿ ಉಗುರುಗಳು ದುರ್ಬಲವಾಗಿರುತ್ತದೆ. ಆದ್ದರಿಂದ ಮ್ಯಾನಿಕ್ಯೂರ್​​​ಗಳನ್ನು ಮಾಡಿಸಬೇಡಿ.