ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಭಜನ್‌ಲಾಲ್ ಶರ್ಮಾ ಆಯ್ಕೆ

12 Dec 2023

Author:ರಶ್ಮಿ.ಕೆ

ಮೊದಲ ಬಾರಿ ಶಾಸಕರಾಗಿರುವ ಭಜನ್‌ಲಾಲ್ ಶರ್ಮಾಗೆ ಒಲಿದ ಸಿಎಂ ಸ್ಥಾನ 

ಭರತ್‌ಪುರದವರಾಗಿರುವ ಶರ್ಮಾ ಸಂಗನೇರಿನಿಂದ ಸ್ಪರ್ಧಿಸಿ ಗೆದ್ದಿದ್ದರು

ರಾಜ್ಯದಲ್ಲಿ ಬಿಜೆಪಿಯ ದೀರ್ಘಾವಧಿಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಶರ್ಮಾ ಕೂಡ ಒಬ್ಬರು

ಶರ್ಮಾ ಆರ್‌ಎಸ್‌ಎಸ್, ಎಬಿವಿಪಿ ಮೂಲಕ ರಾಜಕೀಯಕ್ಕೆ ಪ್ರವೇಶ

ರಾಜಸ್ಥಾನದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು

56ರ ಹರೆಯದ ಶರ್ಮಾ ಸ್ನಾತಕೋತ್ತರ ಪದವೀಧರ

₹ 43.6 ಲಕ್ಷ ಚರ ಆಸ್ತಿ,₹ 1 ಕೋಟಿ ಸ್ಥಿರಾಸ್ತಿ ಸೇರಿದಂತೆ ₹ 1.5 ಕೋಟಿ ಮೌಲ್ಯದ ಆಸ್ತಿ 

ಶರ್ಮಾ ವಿರುದ್ಧ ದಾಖಲಾಗಿರುವುದು ಒಂದೇ ಒಂದು ಕ್ರಿಮಿನಲ್ ಮೊಕದ್ದಮೆ