BSF Rising Day: ನಮ್ಮ ರಾಷ್ಟ್ರ ರಕ್ಷಣೆಯಲ್ಲಿ ಗಡಿ ಭದ್ರತಾ ಪಡೆ ಪಾತ್ರ ಮಹತ್ವದ್ದು: ಮೋದಿ

1 December 2023

Author: akshay pallamjalu 

ಡಿಸೆಂಬರ್ 1 ರಂದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ರೈಸಿಂಗ್ ಡೇ ಆಚರಣೆ ಮಾಡಲಾಗುತ್ತದೆ.

ಈ ದಿನದಂದು ಸೇನೆಯು ಅಚಲವಾದ ಸಮರ್ಪಣೆ, ನಿಸ್ವಾರ್ಥತೆ ಮತ್ತು ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಬಗ್ಗೆ ಸಂಕಲ್ಪವನ್ನು ಮಾಡಿಕೊಳ್ಳತ್ತದೆ.

ಇದೀಗ BSF ರೈಸಿಂಗ್ ಡೇಗೆ ಪ್ರಧಾನಿ ಮೋದಿ ಅವರು ಕೂಡ ಎಕ್ಸ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. 

ನಮ್ಮ ಗಡಿಗಳನ್ನು ಕಾಯುವ ಅತ್ಯುತ್ತಮ ಪಡೆಯನ್ನು ನಾವು ಶ್ಲಾಘಿಸುತ್ತೇವೆ. ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಅವರ ಶೌರ್ಯ ಮತ್ತು ಅಚಲವಾದ ಮನೋಭಾವವು, ಜತೆಗೆ ಅವರ ಸಮರ್ಪಣಾ ಗುಣ ಎಲ್ಲ ನಮ್ಮ ದೇಶದ ಮುಂದೆ ಸಾಕ್ಷಿಯಾಗಿ ನಿಂತಿದೆ. ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಬಿಎಸ್ಎಫ್ ಪಾತ್ರವನ್ನು ನಾನು ಬೆಂಬಲಿಸುತ್ತಾನೆ ಎಂದು ಹೇಳಿದ್ದಾರೆ. 

ಡಿಸೆಂಬರ್ 1, 1965ರ ಪಾಕಿಸ್ತಾನದೊಂದಿಗಿನ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ BSF ಅನ್ನು ಸ್ಥಾಪಿಸಲಾಯಿತು, ಆ ದೇಶವು ಭಾರತದ ವೆಚ್ಚದಲ್ಲಿ ತನ್ನದೇ ಆದ ಗಡಿಯನ್ನು ವಿಸ್ತರಿಸಲು ಪ್ರಯತ್ನಿಸಿತು.

ಇದು ಹಿಮಾಲಯದ ಪರ್ವತ ಭೂಪ್ರದೇಶಗಳಿಂದ ಹಿಡಿದು ರಾಜಸ್ಥಾನದ ಮರುಭೂಮಿ ಮತ್ತು ಕರಾವಳಿ ಪ್ರದೇಶಗಳವರೆಗಿನ ಗಡಿಗಳನ್ನು ಭದ್ರಪಡಿಸಲು ಮೀಸಲಾದ ವಿಶೇಷ ಪಡೆಗಳ ಅಗತ್ಯವಿತ್ತು ಎಂದು ಹೇಳಲಾಗಿದೆ.

ಶಾಂತಿ ಕಾಪಾಡುವಲ್ಲಿ, ಒಳನುಸುಳುವಿಕೆಯನ್ನು ತಡೆಗಟ್ಟುವಲ್ಲಿ, ಕಳ್ಳಸಾಗಾಣಿಕೆ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ, ಭಯೋತ್ಪಾದನೆಯನ್ನು ಎದುರಿಸುವಲ್ಲಿ ಮತ್ತು ರಾಷ್ಟ್ರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಈ ಪಡೆ ನಿರ್ಣಾಯಕ ಪಾತ್ರವಹಿಸಿದೆ.