29 November 2023

ವಿಮಾನದಲ್ಲಿ ಗಂಡ-ಹೆಂಡತಿ ಜಗಳ; ಲುಫ್ಥಾನ್ಸಾ ಏರ್‌ಲೈನ್ ವಿಮಾನ ದೆಹಲಿಯಲ್ಲಿ ಲ್ಯಾಂಡ್

akshay pallamajalu 

ಮ್ಯೂನಿಚ್‌ನಿಂದ ಬ್ಯಾಂಕಾಕ್‌ಗೆ ಹಾರುತ್ತಿದ್ದ ಲುಫ್ಥಾನ್ಸಾ ಏರ್‌ಲೈನ್ ವಿಮಾನ (LH772) ದಿಲ್ಲಿಯಲ್ಲಿ ಲ್ಯಾಂಡ್ ಆಗಿದೆ.

ಪತಿ-ಪತ್ನಿ ನಡುವಿನ ಜಗಳದಿಂದ ಲುಫ್ಥಾನ್ಸಾ ಏರ್‌ಲೈನ್ ವಿಮಾನ  ಸಿಬ್ಬಂದಿಗಳು ಕಿರಿಕಿರಿಗೊಂಡಿದ್ದು ವಿಮಾನವನ್ನು ದಿಲ್ಲಿಯಲ್ಲಿ ಲ್ಯಾಂಡ್ ಮಾಡಿದ್ದಾರೆ. 

ಈ ಗಂಡ -ಹೆಂಡತಿ ಜಗಳಕ್ಕೆ ಕಾರಣ ಏನೆಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಆದರೆ ಇದರಿಂದ ಬಾಕಿ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಲುಫ್ಥಾನ್ಸಾ ಏರ್‌ಲೈನ್ ವಿಮಾನ ಮೊದಲು ಪಾಕಿಸ್ತಾನದಲ್ಲಿ ಇಳಿಯಲು ಕೋರಿತು. ಆದರೆ ವಿಮಾನ ಲ್ಯಾಂಡ್​​​ ಮಾಡಲು ಕಾರಣ ತಿಳಿಸದ ಕಾರಣ ಪಾಕಿಸ್ತಾನ ಲ್ಯಾಂಡಿಂಗ್​​ಗೆ ನಿರಕಾರಿಸಿದೆ. 

ನಂತರ ವಿಮಾನವನ್ನು ದೆಹಲಿಯಲ್ಲಿ ಲ್ಯಾಂಡ್​​​ ಮಾಡಲಾಗಿದೆ.

ಇಬ್ಬರು ದಂಪತಿಗಳನ್ನು ಈಗಾಗಲೇ ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಒಪ್ಪಿಸಲಾಗಿದೆ. 

ಇಬ್ಬರು ದಂಪತಿಗಳ ಜಗಳಕ್ಕೆ ಕಾರಣ ಏನೆಂಬುದನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 Next:  Cyclone Michaung: ಮುಂದಿನ 48 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ