22-12-2023
ಅಯೋಧ್ಯಾ ರಾಮನ ಪ್ರತಿಷ್ಠೆಗೆ ಸೀತಾ ಜನ್ಮಭೂಮಿ ಮಿಥಿಲೆಯಿಂದ ಅದ್ದೂರಿ ಸಿದ್ಧತೆ
Author: Akshatha Vorkady
Pic Credit - Pintrest
ಅಯೋಧ್ಯೆಯಲ್ಲಿ ವಿಶ್ವದಾದ್ಯಂತ ಕೋಟ್ಯಂತರ ಜನರ ಕನಸು ನನಸಾಗುವ ಹಂತ ಸಮೀಪಿಸಿದೆ.
Pic Credit - Pintrest
ರಾಮಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಶ್ರೀರಾಮನ ಪ್ರತಿಮೆ ಸ್ಥಾಪನೆಗೆ ಸಮಯ ನಿಗದಿಪಡಿಸಲಾಗಿದೆ.
Pic Credit - Pintrest
ಜನವರಿ 22, 2024 ರಂದು ಅಭಿಜಿತ್ ಲಗ್ನ, ಮೃಗಶಿರ ನಕ್ಷತ್ರದಲ್ಲಿ 12:20 ಕ್ಕೆ ಶ್ರೀರಾಮನ ಮೂರ್ತಿಯ ಪ್ರತಿಷ್ಠೆ ನಡೆಯಲಿದೆ.
Pic Credit - Pintrest
ಈ ಕಾರ್ಯಕ್ರಮಕ್ಕೆ ಇದೀಗಾಗಲೇ ಸೀತಾ ಮಾತೆಯ ಜನ್ಮಭೂಮಿ ಮಿಥಿಲಾ ನಗರದಿಂದ ಸಿದ್ಧತೆಗಳು ಪ್ರಾರಂಭಗೊಂಡಿದೆ.
Pic Credit - Pintrest
ಪುರಾಣಗಳ ಪ್ರಕಾರ ಜನಕ ಮಹಾರಾಜ ಆಳ್ವಿಕೆಗೆ ಒಳಪಟ್ಟಿದ್ದ ಹಾಗೂ ಸೀತಾ ಮಾತೆ ಜನಿಸಿದ ಪುಣ್ಯಭೂಮಿಯೇ ಬಿಹಾರದ ಮಿಥಿಲಾ.
Pic Credit - Pintrest
ಈ ಪುಣ್ಯ ಭೂಮಿಯಲ್ಲಿ ಕೃಷಿಗೆ ಸಂಬಂಧಿಸಿದಂತೆ ವೀಳ್ಯದೆಲೆ ಹಾಗೂ ಮಖಾನವನ್ನು ಹೆಚ್ಚು ಬೆಳೆಲಾಗುತ್ತದೆ.
Pic Credit - Pintrest
ಶ್ರೀರಾಮನ ಪ್ರತಿಷ್ಠೆ ಸಮಾರಂಭಕ್ಕೆ ಅಯೋಧ್ಯೆಗೆ ವೀಳ್ಯದೆಲೆ ಹಾಗೂ ಮಖಾನ ಕಳುಹಿಸಲಾಗುವುದು ಪಾಟ್ನಾದ ಮಹಾವೀರ ಮಂದಿರದ ಕಾರ್ಯದರ್ಶಿ ಕಿಶೋರ್ ಕುನಾಲ್ ಹೇಳಿದ್ದಾರೆ.
Pic Credit - Pintrest
ರಾಮ ಮಂದಿರ ನಿರ್ಮಾಣಕ್ಕೆ ಮಹಾವೀರ ದೇವಸ್ಥಾನ 10 ಕೋಟಿ ರೂಪಾಯಿ ದೇಣಿಗೆ ಘೋಷಿಸಿತ್ತು,ಈಗಾಗಲೇ 8 ಕೋಟಿ ರೂ.ನೀಡಿದ್ದು, ಉಳಿದ ಮೊತ್ತ ಜ. 15ರಂದು ನೀಡಲಾಗುತ್ತದೆ
Pic Credit - Pintrest
Next: ಹನುಮಂತನ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ