16 December 2023

ಇಂದು ಭಾರತಕ್ಕೆ ವಿಜಯ್ ದಿವಸ, ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ

aakshay pallamajalu

ಭಾರತವು 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ

ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸೈನ್ಯವು ಐತಿಹಾಸಿಕ ವಿಜಯವನ್ನು ಸಾಧಿಸಿತ್ತು, ಭಾರತ ಪ್ರತಿ ವರ್ಷ ಡಿಸೆಂಬರ್ 16ರಂದು ಈ ದಿನದಂದು ಸ್ಮರಿಸಲಾಗುತ್ತದೆ.

ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರನ್ನು ಗೌರವಿಸಲು ಈ ದಿನವನ್ನು ಸ್ಮರಣಾರ್ಥವಾಗಿ ನಡೆಸಲಾಗುತ್ತಿದೆ.

1971ರ ಇಂಡೋ-ಪಾಕಿಸ್ತಾನಿ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವಾಗಿತ್ತು.

ಇದು ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಡೆದ ಯುದ್ಧವಾಗಿತ್ತು.

ಪಾಕಿಸ್ತಾನಿ ಮಿಲಿಟರಿಯ ಪೂರ್ವ ಕಮಾಂಡ್ ಡಿಸೆಂಬರ್ 16, 1971 ರಂದು ಢಾಕಾದಲ್ಲಿ ಒಂದು ಒಪ್ಪಂದಕ್ಕೆ ಸಹಿ ಹಾಕುತ್ತದೆ.

ಒಪ್ಪಂದದ ಅಡಿಯಲ್ಲಿ, ಬಾಂಗ್ಲಾದೇಶದ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದ್ದ 93,000 ಪಾಕಿಸ್ತಾನಿ ಸೈನಿಕರು ಭಾರತೀಯ ಸೇನೆಗೆ ಶರಣಾದರು. 

Next: ಶಿವನಿಗೆ ಅರ್ಪಿಸುವ ನೈವೇದ್ಯ ಹೇಗಿರಬೇಕು?