2 August 2024
Pic credit - Google
Author: Sushma Chakre
1948ರಿಂದ 2014ರವರೆಗೆ ಭಾರತದ ಇತಿಹಾಸದಲ್ಲಿ ಇದುವರೆಗೂ ಸಂಭವಿಸಿದ 8 ಭಯಾನಕ ಭೂಕುಸಿತಗಳ ಬಗ್ಗೆ ಮಾಹಿತಿ ಇಲ್ಲಿದೆ.
Pic credit - Google
ಸೆಪ್ಟೆಂಬರ್ 1948ರಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಉಂಟಾದ ಭಾರೀ ಭೂಕುಸಿತವು 500ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿ ಪಡೆಯಿತು. ಇಡೀ ಗ್ರಾಮವನ್ನು ಸಮಾಧಿ ಮಾಡಿತು.
Pic credit - Google
1968ರಲ್ಲಿ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಪ್ರವಾಹ ಉಂಟಾಗಿ ಭೂಕುಸಿತವನ್ನು ಉಂಟುಮಾಡಿತು. ಇದು 60 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು 91 ವಿಭಾಗಗಳಾಗಿ ಒಡೆಯಿತು. ಈ ದುರಂತದಲ್ಲಿ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
Pic credit - Google
ಆಗಸ್ಟ್ 1998ರಲ್ಲಿ ಉತ್ತರ ಪ್ರದೇಶದ ಮಾಲ್ಪಾದಲ್ಲಿ 7 ದಿನಗಳ ಕಾಲ ಸರಣಿ ಭೂಕುಸಿತಗಳು ಸಂಭವಿಸಿ, 380ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಇದರಿಂದ ಇಡೀ ಗ್ರಾಮ ನಾಶವಾಯಿತು.
Pic credit - Google
ಧಾರಾಕಾರ ಮಳೆಯು ಉತ್ತರಾಖಂಡದಲ್ಲಿ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಯಿತು. ಇದರಿಂದ ಕೇದಾರನಾಥದ ಸುತ್ತಮುತ್ತ 5000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
Pic credit - Google
ಜುಲೈ 2014ರಲ್ಲಿ ಮಹಾರಾಷ್ಟ್ರದ ಮಾಲಿನ್ ಗ್ರಾಮದಲ್ಲಿ ಭಾರೀ ಮಳೆಯು ಭಾರಿ ಭೂಕುಸಿತವನ್ನು ಉಂಟುಮಾಡಿತು. ಇದರಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
Pic credit - Google
2018ರ ಆಗಸ್ಟ್ 10 ಮತ್ತು 17ರ ನಡುವೆ ಕರ್ನಾಟಕದ ಕೊಡಗಿನಲ್ಲಿ ಭಾರೀ ಮಳೆಯು ಹಲವಾರು ಭೂಕುಸಿತಗಳನ್ನು ಉಂಟುಮಾಡಿತು. ಮತ್ತು 20 ಜನರು ಸಾವನ್ನಪ್ಪಿದರು, 4056 ಮನೆಗಳು ಹಾನಿಗೊಳಗಾಯಿತು ಮತ್ತು 18,000 ಜನರನ್ನು ಸ್ಥಳಾಂತರಿಸಲಾಯಿತು. ಇದು ಕೊಡಗು ಜಿಲ್ಲೆಯು ಅನುಭವಿಸಿದ ಮೊದಲ ಬೃಹತ್ ದುರಂತ.
Pic credit - Google
2023ರಲ್ಲಿ ಭಾರೀ ಮಳೆಯು ಮಣಿಪುರದಲ್ಲಿ ಭೂಕುಸಿತವನ್ನು ಉಂಟುಮಾಡಿತು. ಇದರಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
Pic credit - Google
2024ರ ಜುಲೈ 30ರಂದು ಕೇರಳದ ವಯನಾಡಿನಲ್ಲಿ 2 ದೊಡ್ಡ ಭೂಕುಸಿತಗಳು ಸಂಭವಿಸಿದವು. ಈ ದುರಂತದಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇನ್ನೂ ಹೆಣಗಳನ್ನು ಹೊರಗೆಳೆಯುವ ಕಾರ್ಯಾಚರಣೆ ಮುಂದುವರೆದಿದೆ.
Pic credit - Google