ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಕಾರಣವೇನು?

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಕಾರಣವೇನು?

11 December 2023

Author: akshay pallamajalu 

TV9 Kannada Logo For Webstory First Slide
Untitled design - 2023-12-11T124331.935

ಸಂವಿಧಾನದ 370ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ 2019ರ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿ ಕುರಿತು ಸುಪ್ರೀಂ ಇಂದು ತೀರ್ಪು ನೀಡಿದೆ. ಕೇಂದ್ರದ ನಿರ್ಧಾರವನ್ನು ಸುಪ್ರೀಂ ಎತ್ತಿಹಿಡಿದಿದೆ.  

Untitled design - 2023-12-11T124930.253

ಅಕ್ಟೋಬರ್ 17, 1949 ಆರ್ಟಿಕಲ್ 370 ಭಾರತೀಯ ಸಂವಿಧಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿನಾಯಿತಿ ನೀಡುತ್ತದೆ ಮತ್ತು ರಾಜ್ಯವು ತನ್ನದೇ ಆದ ಸಂವಿಧಾನವನ್ನು ರಚಿಸಲು ಅನುಮತಿ ನೀಡುತ್ತದೆ.

Untitled design - 2023-12-11T135800.590

ಜಮ್ಮು ಕಾಶ್ಮೀರಕ್ಕೆ ಬೇರೆ ಕಾನೂನು ಹಾಗೂ ಧ್ವಜವನ್ನು ನೀಡಲಾಗುತ್ತದೆ. ಇದರಿಂದ ಕಾಯಂ ಅಲ್ಲದ ನಿವಾಸಿಗಳು ರಾಜ್ಯದಲ್ಲಿ ನೆಲೆಸುವುದನ್ನು, ಭೂಮಿಯನ್ನು ಖರೀದಿಸುವುದನ್ನು, ಸರ್ಕಾರಿ ಉದ್ಯೋಗಗಳು ಅಥವಾ ವಿದ್ಯಾರ್ಥಿವೇತನ ಪಡೆಯುವುದನ್ನು  ನಿಷೇಧಿಸುತ್ತದೆ.

ಭಾರತದ ಇತರ ರಾಜ್ಯಗಳಂತೆ ಜಮ್ಮು ಕಾಶ್ಮೀರ ಕೂಡ ಒಂದೇ ಕಾನೂನು ಹಾಗೂ ನೀತಿಯನ್ನು ಹೊಂದಬೇಕು ಎಂದು ಬಿಜೆಪಿ ಸರ್ಕಾರ 2019 ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುತ್ತದೆ. 

ಜಮ್ಮು ಕಾಶ್ಮೀರದಲ್ಲಿ ಶಾಂತಿ ಮತ್ತು ಉತ್ತಮ ಕಾನೂನುಗಳನ್ನು ರಚನೆ ಮಾಡಲು ಮೋದಿ ನೇತೃತ್ವದ ಸರ್ಕಾರ ಈ ಕ್ರಮವನ್ನು ಕೈಗೊಳ್ಳುತ್ತದೆ.

ಇದರ ಜತೆಗೆ ಕಾಶ್ಮೀರದಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.

ಕಾಶ್ಮೀರದಲ್ಲಿ ನಡೆಯುತ್ತಿದ್ದ ಗಲಭೆಗಳನ್ನು ನಿಯಂತ್ರಣ ಮಾಡಲು ಹಾಗೂ ಪಾಕಿಸ್ತಾನದ ಒಳನುಸುಳುವಿಕೆಯನ್ನು ತಡೆಗಟ್ಟಲು ಕೇಂದ್ರ ಈ ಮೂಲಕ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.

ಕಾಶ್ಮೀರ ಪಂಡಿತರನ್ನು ಮತ್ತೆ ಕಾಶ್ಮೀರಕ್ಕೆ ಕರೆಸಿಕೊಳ್ಳವ ನಿಟ್ಟಿನಲ್ಲಿ, ಜತೆಗೆ ಅವರಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷ ಕೆಸಲವನ್ನು ಕೇಂದ್ರ ಮಾಡಿದೆ.

Next: ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ?