CWG 2022 ರಲ್ಲಿ  ವಿಜೇತರಾದ ಭಾರತೀಯರು

ಮೀರಾಬಾಯಿ ಚಾನು 49 ಕೆಜಿ ತೂಕ ವಿಭಾಗದಲ್ಲಿ ಮೀರಾ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು

ಸಂಕೇತ್ ಮಹಾದೇವ್ ಸಾಗರ್ ವೇಟ್‌ ಲಿಫ್ಟಿಂಗ್ ನಲ್ಲಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ

ಗುರುರಾಜ್ ಪೂಜಾರಿ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದು ಮಿಂಚಿದ್ದಾರೆ

ಬಿಂದ್ಯಾರಾಣಿ ದೇವಿ 55 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ 116 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಬಾಜಿಕೊಂಡರು

ಜೆರೆಮಿ ಲಾಲ್ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು

ಅಚಿಂತಾ ಶೆಯುಲಿ  73kg ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ಬಂಗಾರಕ್ಕೆ ಕೊರಳೊಡ್ಡಿದ್ದಾರೆ

ಹರ್ಜಿಂದರ್ ಕೌರ್ ಮಹಿಳೆಯರ 71kg ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದು ಬೀಗಿದ್ದಾರೆ

ಎಲ್‌. ಸುಶೀಲಾ ದೇವಿ ಬೆಳ್ಳಿ ಪದಕ ಗೆದ್ದುಕೊಂಡರು

ವಿಜಯ್‌ ಕುಮಾರ್‌ ಯಾದವ್‌ ಕಂಚಿನ ಪದಕ ಗೆದ್ದುಕೊಂಡರು

ಮಹಿಳಾ ಲಾನ್ ಬಾಲ್ ತಂಡ ಲಾನ್ ಬಾಲ್ ಮಹಿಳೆಯರ ನಾಲ್ಕರ ಕೂಟದಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ ಚಿನ್ನ ಗೆದ್ದಿದೆ

ಪುರುಷರ ಟೇಬಲ್ ಟೆನ್ನಿಸ್ ತಂಡ ಪುರುಷರ ಟೇಬಲ್ ಟೆನಿಸ್ ತಂಡ ಫೈನಲ್‌ನಲ್ಲಿ ಭಾರತ ಸಿಂಗಾಪುರವನ್ನು ಮಣಿಸಿ ಚಿನ್ನ ಗೆದ್ದುಕೊಂಡಿತು