ನೀರಜ್ ಅಥವಾ ಮನು ಭಾಕರ್; ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

15  August 2024

Pic credit: Google

ಪೃಥ್ವಿ ಶಂಕರ

Pic credit: Google

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಪಡೆ ಒಟ್ಟು ಆರು ಪದಕಗಳನ್ನು (ಒಂದು ಬೆಳ್ಳಿ ಮತ್ತು ಐದು ಕಂಚು) ಗೆಲ್ಲುವಲ್ಲಿ ಯಶಸ್ವಿಯಾಯಿತು.

Pic credit: Google

ಈ ಟೂರ್ನಿಯಲ್ಲಿ ಮನು ಭಾಕರ್ ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದು, ಸ್ವತಂತ್ರ ಭಾರತದ ನಂತರ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Pic credit: Google

ಅದೇ ಸಮಯದಲ್ಲಿ ನೀರಜ್ ಚೋಪ್ರಾ ಅವರು 89.45 ಮೀಟರ್‌ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದರು.

Pic credit: Google

ತಮ್ಮ ಪ್ರದರ್ಶನದ ಮೂಲಕ ಇಡೀ ದೇಶಕ್ಕೆ ಕೀರ್ತಿ ತಂದ ಈ ಇಬ್ಬರ ನಿವ್ವಳ ಮೌಲ್ಯದ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

Pic credit: Google

ಮಾಧ್ಯಮ ವರದಿಗಳ ಪ್ರಕಾರ, ನೀರಜ್ ಚೋಪ್ರಾ ಅವರ ನಿವ್ವಳ ಮೌಲ್ಯವು ಮನು ಭಾಕರ್‌ಗಿಂತ ಹೆಚ್ಚಿದ್ದು, ಇಬ್ಬರ ಆಸ್ತಿಯಲ್ಲಿ ಸುಮಾರು 25 ಕೋಟಿ ರೂಪಾಯಿ ವ್ಯತ್ಯಾಸವಿದೆ.

Pic credit: Google

ಜಿಕ್ಯೂ ಇಂಡಿಯಾದ ವರದಿಯ ಪ್ರಕಾರ ನೀರಜ್ ಅವರ ನಿವ್ವಳ ಮೌಲ್ಯ $4.5 ಮಿಲಿಯನ್ ಅಂದರೆ ಸರಿಸುಮಾರು 37 ಕೋಟಿ ರೂ.

Pic credit: Google

ಇತ್ತ ಮನು ಭಾಕರ್ ಅವರ ನಿವ್ವಳ ಮೌಲ್ಯವು ಮಾಧ್ಯಮ ವರದಿಗಳ ಪ್ರಕಾರ 12 ಕೋಟಿ ಎಂದು ಹೇಳಲಾಗಿದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Pic credit: Google

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಮನು 30 ಲಕ್ಷ ರೂಪಾಯಿ ಬಹುಮಾನವನ್ನೂ ಪಡೆದಿದ್ದಾರೆ, ಆದರೆ ನೀರಜ್ ಅವರ ಬಹುಮಾನದ ಮೊತ್ತವನ್ನು ಖಚಿತಪಡಿಸಲಾಗಿಲ್ಲ.