ಚಿನ್ನದ ಹುಡುಗನ ಐತಿಹಾಸಿಕ ಸಾಧನೆ: ನೀರಜ್ ಮುಡಿಗೆ ಮತ್ತೊಂದು ಬಂಗಾರ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಚಿನ್ನ

ಹಂಗೇರಿಯ ಬುಡಾಪೆಸ್ಟ್'ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್

ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದು ಐತಿಹಾಸಿಕ ಸಾಧನೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ನೀರಜ್ ಆಗಿದ್ದಾರೆ

2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನಲ್ಲಿ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು

ಈ ಬಾರಿ ಚೋಪ್ರಾ ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದರು

2ನೇ ಸುತ್ತಿನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದ ನೀರಜ್ ಚೋಪ್ರಾ

2024 ಪ್ಯಾರಿಸ್ ಒಲಿಂಪಿಕ್ ಗೇಮ್ಸ್'ಗೆ ಚೋಪ್ರಾ ಅರ್ಹತೆ ಪಡೆದುಕೊಂಡಿದ್ದಾರೆ