ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಬಾಲಿವುಡ್ ಬೆಡಗಿ
ಹೌದು ಬಾಲಿವುಡ್ ನಟಿ ನೇಹಾ ಧೂಪಿಯಾ ಮದುವೆಗೂ ಮುನ್ನ ಗರ್ಭಿಣಿಯಾಗಿರುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಹಿಂದಿ ಸಿನಿಮಾರಂಗದಲ್ಲಿ ತನ್ನದೇ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದ ನಟಿ, ಇದೀಗಾ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಕೂಡ 2018ರಲ್ಲಿ ಗಡಿ ಬಿಡಿಯಲ್ಲಿ ವಿವಾಹವಾಗಿದ್ದರು.
ತನ್ನ ಸಿನಿಮಾ ಜೀವನ ಬಿಟ್ಟು ಆತುರದಲ್ಲಿ ಮದುವೆಯಾಗಲು ಕಾರಣ ಏನಾಗಿತ್ತು ಎಂಬುದಕ್ಕೆ ಇದೀಗಾ ಉತ್ತರ ನೀಡಿದ್ದಾರೆ.
ಗರ್ಭಿಣಿಯಾಗಿರುವುದನ್ನು ತಿಳಿದ ತನ್ನ ಪೋಷಕರು ಕೇವಲ ಎರಡೇ ದಿನದಲ್ಲಿ ವಿವಾಹ ಆಗಬೇಕು ಎಂದು ಷರತ್ತು ಹಾಕಿದ್ದರು.
ಕೇವಲ 2 ದಿನಗಳ ತಯಾರಿಯಲ್ಲಿ ಒಂದಿಷ್ಟು ಸಂಬಂಧಿಕರ ಸಮ್ಮಖದಲ್ಲಿ ಮದುವೆ ನೆರವೇರಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.