ಬೆಂಗಳೂರಿನಲ್ಲಿ ಬೆಳೆದ ಈ ಚೆಲುವೆ ಪ್ರಭಾಸ್ ಸಿನಿಮಾಕ್ಕೆ ನಾಯಕಿ

ಹೈದರಾಬಾದ್​ನಲ್ಲಿ ಹುಟ್ಟಿ ಬೆಂಗಳೂರಲ್ಲಿ ಬೆಳೆದ ನಿಧಿ ಅಗರ್ವಾಲ್ ಪ್ರಭಾಸ್ ಸಿನಿಮಾದ ನಾಯಕಿ

ಪ್ರಭಾಸ್ 'ರಾಜಾ ಡಿಲಕ್ಸ್' ಹೆಸರಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾಕ್ಕೆ ನಿಧಿ ನಾಯಕಿ

ಪ್ರಭಾಸ್ ನಟನೆಯ 'ರಾಜಾ ಡಿಲಕ್ಸ್' ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಲಿದ್ದಾರೆ.

ನಿಧಿ ಅಗರ್ವಾಲ್ ಹುಟ್ಟುಹಬ್ಬವಾದ ಆಗಸ್ಟ್ 17ರಂದು ನಿರ್ದೇಶಕ ಮಾರುತಿ ಈ ವಿಷಯ ಘೋಷಿಸಿದ್ದಾರೆ.

ನಿಧಿ ಅಗರ್ವಾಲ್ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಕನ್ನಡ ಮಾತನಾಡಬಲ್ಲರು ಸಹ.

ಹಿಂದಿ ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿದ ನಿಧಿ ಅಗರ್ವಾಲ್, ಮಿಂಚಿದ್ದು ತಮಿಳು, ತೆಲುಗು ಚಿತ್ರರಂಗಗಳಲ್ಲಿ.

ನಿಧಿ ಅಗರ್ವಾಲ್ ಪ್ರಸ್ತುತ ಪವನ್ ಕಲ್ಯಾಣ್ ಜೊತೆಗೆ 'ಹರಿಹರ ವೀರ ಮಲ್ಲು' ಸಿನಿಮಾದಲ್ಲಿ ನಟಿಸಿದ್ದಾರೆ.

'ರಾಜಾ ಡಿಲಕ್ಸ್' ನಿಧಿ ಅಗರ್ವಾಲ್​ರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಲಿರಲಿದೆ.