ಪೌಷ್ಟಿಕತಜ್ಞ ಅಂಜಲಿ ಮುಖರ್ಜಿವರು ನಿಮ್ಮ ಜೀವನಶೈಲಿಯಲ್ಲಿ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

ಹೆಚ್ಚು ನಾರಿನಂಶವನ್ನು ಸೇವಿಸಿ, ಬಿಳಿ ಬ್ರೆಡ್ ಮತ್ತು ಪಾಸ್ತ ಬದಲಿಗೆ ಧಾನ್ಯಗಳನ್ನು ಸೇವಿಸಿ.

ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಆಹಾರದ ಕೊಲೆಸ್ಟ್ರಾಲ್ ಮಿತಿಗೊಳಿಸಿ - ಸಂಪೂರ್ಣ ಹಾಲು, ಚೀಸ್ ಇತ್ಯಾದಿಗಳ ಬಳಕೆಯನ್ನು ಕಡಿಮೆ ಮಾಡಿ.

ಬೀಜಗಳು, ಆಲಿವ್ ಎಣ್ಣೆ ಮತ್ತು ಆವಕಾಡೊ ನಿಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡುತ್ತದೆ.

ಸಂಸ್ಕರಿಸಿದ ಆಹಾರಗಳಲ್ಲಿ ಕಂಡುಬರುವ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ತಪ್ಪಿಸಿ.

ಉಪ್ಪು ಸೇವನೆಯನ್ನು ಮಿತಿಗೊಳಿಸಿ - ಉಪ್ಪಿನಲ್ಲಿ ಹೆಚ್ಚಿನ ಸೋಡಿಯಂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.