ಏಷ್ಯನ್ ಗೇಮ್ಸ್
ನ ಮಿಶ್ರ ನಡಿಗೆಯ ಸ್ಪರ್ಧೆಯಲ್ಲಿ ಭಾರತದ ಮಂಜು ರಾಣಿ ಮತ್ತು ರಾಮ್ ಬಾಬು ಜೊತೆಗೂಡಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ 23 ವರ್ಷದ ಯುವ ಕ್ರೀಡಾಪಟು ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಭಾರತಕ್ಕೆ ಕಂಚಿನ ಪದಕ
ನಡಿಗೆ ಸ್ಪರ್ಧೆಯಲ್ಲಿ ಮುಖ್ಯವಾಗಿ ಬೇಕಿರುವುದು ಅತ್ಯುತ್ತಮ ಶೂಸ್. ಆದರೆ ಅಂತಹ ಶೂಗಳನ್ನು ಖರೀದಿಸಲು ಮಂಜು ರಾಣಿ ಬಳಿ ಹಣವಿರಲಿಲ್ಲ.
ಸವಾಲುಗಳ ಸಾಧನೆ
ಮಗಳಿಗೆ ಉತ್ತಮ ತರಬೇತಿ ನೀಡಲು ತಂದೆ ಜಮೀನನ್ನೇ ಮಾರಿದ್ದರು. ಈ ಮೂಲಕ ಮಗಳ ಕನಸಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಿಂತಿದ್ದರು. ಇದರಿಂದ ಇಂದು ಮಂಜು ರಾಣಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಯಿತು.
ಜಮೀನು ಮಾರಿದ ತಂದೆ
ಇದಾಗ್ಯೂ ಸಾಲದ ಸುಳಿಯಲ್ಲಿ ಸಿಲುಕಿದ್ದರು. 2019 ರಲ್ಲಿ 7 ವರ್ಷಗಳವರೆಗೆ ತಮ್ಮ ಕ್ರೀಡಾ ಸಾಧನೆಗಾಗಿ 8 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು.
8 ಲಕ್ಷ ರೂ. ಸಾಲ
ಇದೀಗ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಮಂಜು ರಾಣಿಯ ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.