ಗೋಡೆಗಳಿಗೆ ಬಳಿಯುವ ಬಣ್ಣ ಬಣ್ಣದ ಪೈಂಟ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು

ಮನೆಯ ಅಂದವನ್ನು ಹೆಚ್ಚಿಸಲು ಗೋಡೆಗಳಿಗೆ ಬಣ್ಣ ಬಣ್ಣದ ಪೈಂಟ್ ಗಳನ್ನು ಹಚ್ಚಲಾಗುತ್ತದೆ.

ಇದು ನಿಮ್ಮ ಮನೆಯ ಅಂದವನ್ನು ಹೆಚ್ಚಿಸಬಹುದು, ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ನೀವು ಬಣ್ಣಕ್ಕೆ ಒಡ್ಡಿಕೊಂಡಾಗ, ಅದು ನಿಮ್ಮ ಕಣ್ಣು, ಮೂಗು ಅಥವಾ ಗಂಟಲಿನ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

ಇದು ಕೆಮ್ಮು, ಉಬ್ಬಸ, ಉಸಿರಾಟದ ತೊಂದರೆ ಮತ್ತು ಎದೆಯ ಬಿಗಿತದಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗಬಹುದು ಎಂದು ಡಾ. ಬಾಲಸುಬ್ರಮಣಿಯನ್ ಎಚ್ಚರಿಸುತ್ತಾರೆ. 

ಪೇಂಟ್‌ಗಳಲ್ಲಿ  ಸೀಸ, ಪಾದರಸ, ಕ್ಸೈಲೀನ್‌ನಂತಹ ವಿಷಕಾರಿ ರಾಸಾಯನಿಕಗಳು ತುಂಬಿರುತ್ತದೆ. 

ಇದು ತಲೆನೋವು, ತಲೆತಿರುಗುವಿಕೆ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ಇನ್ನು ಮುಂದೆ ಬಣ್ಣಗಳನ್ನು ಆಯ್ಕೆ ಮಾಡುವ ಮುನ್ನ ತಜ್ಞರು ನೀಡಿರುವ ಸಲಹೆ ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.