ಆಧಾರ್ ಮತ್ತು ಪಾನ್ ಲಿಂಕ್ ಪ್ರಕ್ರಿಯೆಯಿಂದ ಯಾರಿಗೆ ವಿನಾಯಿತಿ ಇದೆ, ಇಲ್ಲಿದೆ ನೋಡಿ ವಿವರ

ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಮಾರ್ಚ್ 31ರವರೆಗೆ ಮಾತ್ರ ಸರ್ಕಾರ  ಕಾಲಾವಕಾಶ ನೀಡಿದೆ.

ಮಾರ್ಚ್ 31ರ ಒಳಗಾಗಿ ಆಧಾರ್ ಜೊತೆ ಜೋಡಣೆಯಾಗದ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ.

ಮಾರ್ಚ್ 31 ರೊಳಗೆ ಲಿಂಕ್ ಮಾಡದೆ ಬಳಸಲು ಯತ್ನಿಸಿದರೆ 1,000 ರೂ.ನಿಂದ 10,000 ರೂ. ದಂಡ ವಿಧಿಸಲಾಗುತ್ತದೆ.

ಮೇ 2017 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಕೆಲವು ವರ್ಗದ ಜನರಿಗೆ ವಿನಾಯಿತಿ ನೀಡಲಾಗಿದೆ.

ಅಸ್ಸಾಂ, ಜಮ್ಮು ಕಾಶ್ಮೀರ ಮತ್ತು ಮೇಘಾಲಯದ ನಿವಾಸಿಗಳಿಗೆ ಈ ಲಿಂಕ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದೆ.

ಭಾರತದ ಪ್ರಜೆಯಲ್ಲದವರು ಅಂದರೆ ಅನಿವಾಸಿ ಭಾರತೀಯರು (ಎನ್ ಆರ್ ಐ) ಆಧಾರ್ ಮತ್ತು ಪಾನ್ ಲಿಂಕ್  ಮಾಡುವ ಅಗತ್ಯವಿಲ್ಲ.

ಎಂಭತ್ತು ವರ್ಷ ಅಥವಾ ಎಂಭತ್ತಕ್ಕಿಂತ ಮೇಲ್ಪಟ್ಟವರು ಆಧಾರ್ ಮತ್ತು ಪಾನ್ ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವ ಅಗತ್ಯವಿಲ್ಲ.