ಮುಖದಲ್ಲಿ ಮೊಡವೆ ಹುಟ್ಟಲು ಕಾರಣ ಏನು ಗೊತ್ತಾ?

ಮೊಡವೆಗಳು ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಹುಟ್ಟಿಕೊಳ್ಳುತ್ತದೆ.

ಇದು ಸಾಕಷ್ಟು ಹದಿಯರೆಯದ ವಯಸ್ಸಿನವರಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಪಡಿಸುತ್ತದೆ.

ಆದ್ದರಿಂದ ಮೊಡವೆಗಳಿಂದ ಮುಖ ಹಾಳಾಗುತ್ತಿದೆ ಎಂದು ಚಿಂತಿಸುವ ಬದಲು ಕಾರಣ ತಿಳಿದುಕೊಳ್ಳಿ.

ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಕಾಫಿ ಸೇವನೆಯನ್ನು ತಪ್ಪಿಸಿ.

ಹಾರ್ಮೋನ್​​ ಮತ್ತು ಈಸ್ಟ್ರೋಜೆನ್​​ ಮಟ್ಟ ಬದಲಾವಣೆ ಮೊಡವೆಗೆ ಕಾರಣವಾಗಬಹುದು.

ಕೆಲವೊಂದು ಸೌಂದರ್ಯ ವರ್ಧಕಗಳು ಮೊಡವೆ ಹುಟ್ಟಿಕೊಳ್ಳಲು ಕಾರಣವಾಗಬಹುದು.

ಅತಿಯಾದ ಒತ್ತಡದ ಜೀವನಶೈಲಿ ಮೊಡವೆ ಹುಟ್ಟಲು ಮತ್ತೊಂದು ಪ್ರಮುಖ ಕಾರಣ.

ಎಣ್ಣೆಯಲ್ಲಿ ಕರಿದ ಆಹಾರಗಳ ಅತಿಯಾದ ಸೇವನೆ ಮುಖದಲ್ಲಿ ಮೊಡವೆಗೆ ಕಾರಣವಾಗಬಹುದು.