ದೇಶದ ವಿವಿಧ ಪ್ರದೇಶಗಳಲ್ಲಿ ದಸರಾ ಸಂಭ್ರಮಾಚರಣೆಯ ವಿಶೇಷತೆ

ವಾರಣಾಸಿ, ಉತ್ತರ ಪ್ರದೇಶ ವಾರಣಾಸಿಯ ದಸರಾ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳು ನೀವು ಒಂದ ಭಾರಿ ಭೇಟಿ ನೀಡಲೇಬೇಕು. ಬಹಳ ಸರಳವಾಗಿ ಆಚರಿಸಲಾಗುತ್ತದೆ

ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದ ನವರಾತ್ರಿ ಉತ್ಸವ ಜಗತ್ಪ್ರಸಿದ್ಧ. ಇಡಿ ರಾಜ್ಯ ಒಟ್ಟಾಗಿ ಯಾವುದೇ ಬೇದ-ಭಾವವಿಲ್ಲದೆ ಆಚರಿಸಲಾಗುತ್ತದೆ

ಉತ್ತರಾಖಂಡ ಉತ್ತರಾಖಂಡಲ್ಲೂ ನವರಾತ್ರಿಯನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ.  ರಾಜ್ಯದ ನವದೇವಿ ದೇವಸ್ಥಾನಗಳಾದ ನೈನಾ ದೇವಿ, ಕಸಾರ ದೇವಿ, ಧರಿ ದೇವಿ, ಮಾನಸಾ ದೇವಿ ಮತ್ತು ಚಂಡಿ ದೇವಿ ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ

ಕರ್ನಾಟಕ, ಮೈಸೂರು ಮೈಸೂರು ದಸರಾ ಕೂಡ ಜಗತ್ಪ್ರಸಿದ್ಧ. ದಸರಾವನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ. ವಿಜಯದಶಮಿಯಂದು ನಡೆಯುವ ಜಂಬು ಸವಾರಿ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತಾದೆ.

ಮಹರಾಷ್ಟ್ರ ಮಹರಾಷ್ಟ್ರದಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ದಸರಾ ಸಂದರ್ಭದಲ್ಲಿ ದಾಂಡಿಯಾ ಮತ್ತು ಗರ್ಭಾ ನೃತ್ಯ ಬಹಳ ವಿಶೇಷ.

ಹಿಮಾಚಲ ಪ್ರದೇಶ ಹಿಮಾಚಲ ಪ್ರದೇಶದಲ್ಲಿ ದೇವಿ ದುರ್ಗೆಯ ಸಾಕಷ್ಟು ದೇವಸ್ಥಾನಗಳು ಇದ್ದು, ಬಹಳ ಅದ್ಧೂರಿಯಾಗಿ ದಸರಾವನ್ನು ಆಚರಿಸುತ್ತಾರೆ. ಕುಲ್ಲು ದಸರಾ ಬಹಳ ವಿಶಿಷ್ಟವಾಗಿದ್ದು, ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ.

ಗುಜರಾತ ಗುಜರಾತ ರಾಜ್ಯ ಕೂಡ ನವರಾತ್ರಿ ಆಚರಣೆಗೆ ಬಹಳಷ್ಟು ಹೆಸರು ಮಾಡಿದೆ. ನವರಾತ್ರಿ ಸಮಯದಲ್ಲಿ ವಿವಿಧ ಸಂಸ್ಕೃತಿಗಳು ಅನಾವರಣಗೊಳ್ಳುತ್ತವೆ. ವಿಶೇಷವಾಗಿ ದಾಂಡಿಯಾ ಮತ್ತು ಗರ್ಭಾ ನೃತ್ಯ.

ದೆಹಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೆಂಡಲ್‌ಗಳು, ವಿವಿಧ ಧಾರ್ಮಿಕ ಆಚರಣೆಗಳು, ಗಾರ್ಬಾ ರಾತ್ರಿ ಆಕರ್ಷಣೀಯವಾಗಿರುತ್ತವೆ. ವಿಶೇಷವಾಗಿ ದಸರಾ ಸಮಯದಲ್ಲಿ ತಯಾರಿಸುವ ತಿಂಡಿ-ತಿನಿಸುಗಳು ನಿಮ್ಮ ಬಾಯಲ್ಲಿ ನೀರು ತರಿಸಲಾರದೆ ಇರದು

ಛತ್ತೀಸಗಡ, ಬಸ್ತಾರ್ ಛತ್ತೀಸ್‌ಗಢದ ಬಸ್ತಾರ್ ಪಟ್ಟಣದಲ್ಲಿ ನವರಾತ್ರಿ ಉತ್ಸವ ಸಾಕಷ್ಟು ವರ್ಷಗಳ ಇತಿಹಾಸ ಹೊಂದಿದೆ.    ಈ ಸ್ಥಳವು ಶಕ್ತಿಪೀಠವಾದ ದಂತೇಶ್ವರಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.