ದಕ್ಷಿಣ ಭಾರತದ ಅತ್ಯುತ್ತಮ ಪ್ರವಾಸಿತಾಣಗಳ ವಿವರ ಇಲ್ಲಿವೆ
ದಕ್ಷಿಣ ಭಾರತವು ಶ್ರೀಮಂತ ವಾಸ್ತುಶೈಲಿ ಹಾಗೂ ವೈವಿಧ್ಯತೆಗಳಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಕೇರಳದ ಹಿನ್ನೀರು: ಅರೇಬಿಯನ್ ಸಮುದ್ರ ತೀರಕ್ಕೆ ಸಮಾನಾಂತರವಾಗಿ ಇರುವ ಉಪ್ಪುನೀರಿನ ಕೆರೆಗಳು ಮತ್ತು ಸರೋವರಗಳಲ್ಲಿ ದೋಣಿ ಪ್ರಯಾಣ ಉತ್ತಮ ಅನುಭವವನ್ನು ನೀಡುತ್ತದೆ.
ಹಂಪಿ: ಕರ್ನಾಟಕದ ಐತಿಹಾಸಿಕ ತಾಣವಾಗಿದ್ದು, ಇಲ್ಲಿ ಅನೇಕ ಸ್ಮಾರಕಗಳು ಹಾಗೂ ದೇವಾಲಯಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಮಡಿಕೇರಿ: ಹಸಿರಿನಿಂದ ಕಂಗೊಳಿಸುವ ಕಾಫಿ ತೋಟ, ಜಲಪಾತ ಹಾಗೂ ಟ್ರೆಕ್ಕಿಂಗ್ಗಳಿಂದ ಹೆಸರುವಾಸಿಯಾಗಿದೆ.
ಮಹಾಬಲಿಪುರಂ: ತಮಿಳುನಾಡಿನ ಐತಿಹಾಸಿಕ ತಾಣ ಇದಾಗಿದ್ದು, ಇಲ್ಲಿ ಪುರಾತನ ದೇವಾಲಯ, ಸ್ಮಾರಕ ಹಾಗೂ ಗುಹೆಗಳನ್ನು ಕಾಣಬಹುದು.
ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರು ಐತಿಹಾಸಿಕ ನಗರವಾಗಿದ್ದು, ಇಲ್ಲಿ ಅರಮನೆ, ಪುರಾತನ ದೇವಾಲಯ ಹಾಗೂ ವಸ್ತು ಸಂಗ್ರಹಾಲಯವನ್ನು ಕಾಣಬಹುದು.