72ರ ವಯಸ್ಸಿನಲ್ಲೂ ಮೋದಿ ಫಿಟ್ ಆಗಿರಲು ಕಾರಣ ಏನು ಗೊತ್ತಾ?

ಇತ್ತೀಚೆಗಷ್ಟೇ (ಏ. 24) ಪ್ರಧಾನಿ ಮೋದಿ 36 ಗಂಟೆಗಳಲ್ಲಿ 8 ನಗರಗಳಲ್ಲಿ 7 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತನ್ನ 72 ವಯಸ್ಸಿನಲ್ಲಿಯೂ ಫಿಟ್ ಆಗಿದ್ದು, ಬಿಡುವಿಲ್ಲದಂತೆ ಸಾಕಷ್ಟು ಪ್ರಯಾಣ ಬೆಳೆಸುತ್ತಿರುವುದನ್ನು ಕಾಣಬಹುದು.

ಪ್ರಧಾನಿ ಮೋದಿ ಈ ವಯಸ್ಸಿನಲ್ಲೂ ಇಷ್ಟೊಂದು ಫಿಟ್​​ ಆಗಿರಲು ಕಾರಣ ಅವರ ಜೀವನಶೈಲಿ. 

ಹಲವು ವರ್ಷಗಳಿಂದ ಯೋಗಾಭ್ಯಾಸವು ನನ್ನ ಜೀವನದ ಅವಿಭಾಜ್ಯ ಅಂಗ ಎಂದು ಸ್ವತಃ ಪ್ರಧಾನಿ ಟ್ವೀಟ್​ ಹಂಚಿಕೊಂಡಿದ್ದಾರೆ.

ಪ್ರಧಾನಿ ವಾರಕೊಮ್ಮೆ ಅಥವಾ 2ಬಾರಿ ಯೋಗ ನಿದ್ರಾ ಅಭ್ಯಾಸ ಮಾಡುತ್ತಾರೆ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯಕ.

ಪ್ರಧಾನಿಯ ಉಪಹಾರಕ್ಕೆ ಸಂಬಂಧಿಸಿದಂತೆ ಹಣ್ಣುಗಳಿಗೆ ಹೆಚ್ಚಿನ ಆದ್ಯತೆ, ಉಪಹಾರವನ್ನು ಬೆಳಗ್ಗೆ 9 ಗಂಟೆಯ ಒಳಗಾಗಿ ಪೂರ್ಣಗೊಳಿಸುತ್ತಾರೆ.

ಸಂದರ್ಶನವೊಂದರಲ್ಲಿ ಮೋದಿ ಅವರು ಪ್ರತೀದಿನ ಬೆಚ್ಚಗಿನ ನೀರು ಕುಡಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಇದಲ್ಲದೇ, ರಾತ್ರಿ ಮಲಗುವ ಮುನ್ನ ಕೆಲವು ಹನಿ ಉಗುರು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಮೂಗಿಗೆ ಹಾಕುತ್ತಾರೆ ಎಂದು ಹೇಳಿಕೊಂಡಿದ್ದಾರೆ.