ಹೊಸ ವೇರಿಯೆಂಟ್'ನಲ್ಲಿ ಪೋಕೋ C51 ಫೋನ್ ಬಿಡುಗಡೆ

04 September, 2023

Pic credit - Google

ಕಳೆದ ಏಪ್ರಿಲ್'ನಲ್ಲಿ ಬಿಡುಗಡೆ ಆಗಿದ್ದ ಪೋಕೋ C51 ಸ್ಮಾರ್ಟ್'ಫೋನ್ ಈಗ ನೂತನ 6GB + 128GB ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ.

Pic credit - Google

ಹೊಸ 6GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ ಭಾರತದಲ್ಲಿ 8,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಫ್ಲಿಪ್'ಕಾರ್ಟ್ ಮೂಲಕ  ಖರೀದಿಗೆ ಸಿಗಲಿದೆ.

Pic credit - Google

ಅತ್ಯಂತ ಕಡಿಮೆ ಬೆಲೆಯ ಈ 4ಜಿ ಫೋನ್ ಮೊದಲಿಗೆ 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ರಿಲೀಸ್ ಆಗಿತ್ತು. ಇದರ ಬೆಲೆ 6,499 ರೂ. ಆಗಿದೆ.

Pic credit - Google

ಈ ಫೋನ್ 6.52-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಇದು 7GB ಟರ್ಬೊ RAM ಮತ್ತು 64 GB ಆಂತರಿಕ ಸಂಗ್ರಹಣೆಯ ಶೇಖರಣಾ ಸಾಮರ್ಥ್ಯದೊಂದಿಗೆ ಬರುತ್ತದೆ.

Pic credit - Google

ಮೀಡಿಯಾಟೆಕ್ ಹೀಲಿಯೊ G36 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

Pic credit - Google

ಪೋಕೋ C51 ಸ್ಮಾರ್ಟ್'ಫೋನ್ 8 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ಮುಂಭಾಗ ಸೆಲ್ಫೀ ಕ್ಯಾಮೆರಾವನ್ನು ಒಳಗೊಂಡಿದೆ.

Pic credit - Google

ಈ ಫೋನ್ ಆಂಡ್ರಾಯ್ಡ್ 13 ನ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಲ್ಲಿ ರನ್ ಆಗುತ್ತದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಅಕ್ಸೆಲೆರೊಮೀಟರ್‌ ಹೊಂದಿದೆ.

Pic credit - Google

ಬಜೆಟ್ ಬೆಲೆಗೆ ನೀವು ಒಂದೊಳ್ಳೆ 4ಜಿ ಸ್ಮಾರ್ಟ್'ಫೋನ್ ಹುಡುಕುತ್ತಿದ್ದರೆ ಪೋಕೋ C51 ಅತ್ಯುತ್ತಮ ಆಯ್ಕೆ ಆಗಿದೆ. ಈ ಫೋನಿಗೆ ಭರ್ಜರಿ ಡಿಮ್ಯಾಂಡ್ ಕೂಡ ಇದೆ.

Pic credit - Google