ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಸಂಭ್ರಮಿಸಲು ರೆಡಿಯಾದ ಡಾಲಿ

20 August 2023

ಆಗಸ್ಟ್‌ 23ರಂದು ಡಾಲಿ ಧನಂಜಯ್‌ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 

20 August 2023

ಇದೀಗಾ ಐದು ವರ್ಷಗಳ ಬಳಿಕ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಪ್ಲಾನ್​​ ಮಾಡಿಕೊಂಡಿರುವ ಡಾಲಿ

20 August 2023

ಈ ಕುರಿತು ವಿಡಿಯೋ ಒಂದನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಜೊತೆಗೆ ಮನವಿಯನ್ನು ಮಾಡಿದ್ದಾರೆ.

20 August 2023

2018ರಲ್ಲಿ ಜಯನಗರದ ಶಾಲಿನಿ ಗ್ರೌಂಡ್ಸ್​ನಲ್ಲಿ ಕೊನೆಯದಾಗಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಡಾಲಿ.

20 August 2023

ಆದರೆ ಇದೀಗಾ 5 ವರ್ಷಗಳ ಬಳಿಕ ಡಾಲಿ ಅಭಿಮಾನಿಗಳಿಗೆ ಗುಡ್​​​ ನ್ಯೂಸ್​ ನೀಡಿದ್ದಾರೆ.

20 August 2023

ಈ ಬಾರಿ ನಿಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ಆದರೆ ಮನೆಯಲ್ಲಿ ಅಲ್ಲ. ಯಾರೂ ಮನೆ ಹತ್ತಿರ ಬರಬೇಡಿ ಎಂದು ಡಾಲಿ ಮನವಿ ಮಾಡಿದ್ದಾರೆ.

20 August 2023

ಆಗಸ್ಟ್ 22ರಂದು ಸಂಜೆ ನಂದಿ ಲಿಂಕ್ಸ್ ಗ್ರೌಂಡ್ಸ್​ನಲ್ಲಿ ರಾತ್ರಿ 11 ಗಂಟೆಗೆ ನಿಮ್ಮೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

20 August 2023

ಆಗಸ್ಟ್ 23, ಅದೇ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ನಿಮ್ಮೊಟ್ಟಿಗೆ ಇರಲಿದ್ದೇನೆ. ಆದರೆ ಯಾರೂ ಕೇಕ್ ಹಾಗೂ ಹಾರಗಳನ್ನು ತರಬೇಡಿ ಎಂದ ಡಾಲಿ.

20 August 2023