ಇಂದು ಟೈಬ್ರೇಕರ್ ಪಂದ್ಯ: ಪ್ರಜ್ಞಾನಂದ ಮೇಲೆ ಎಲ್ಲರ ಕಣ್ಣು

ಚೆಸ್ ವಿಶ್ವಕಪ್ ಫೈನಲ್ ಅಝರ್'ಬೈಜಾನ್'ನಲ್ಲಿ ನಡೆಯುತ್ತಿದೆ

ಆರ್. ಪ್ರಜ್ಞಾನಂದ-ಮ್ಯಾಗ್ನಸ್ ಕಾರ್ಲ್‌ಸೆನ್ ನಡುವಣ ಮೊದಲ ಎರಡು ಗೇಮ್ ಡ್ರಾ ಆಗಿತ್ತು

ಇಂದು ನಡೆಯಲಿರುವ ಟೈಬ್ರೇಕರ್ ಪಂದ್ಯ ಮೂಲಕ ಫಲಿತಾಂಶ ನಿರ್ಧರವಾಗಲಿದೆ

ಬುಧವಾರ ನಡೆದ 2ನೇ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡಿತ್ತು

ಟೈಬ್ರೇಕರ್'ನಲ್ಲಿ 25 ನಿಮಿಷಗಳ ನಿಯಂತ್ರಣದೊಂದಿಗೆ 2 ಪಂದ್ಯವನ್ನು ಆಡಲಾಗುತ್ತದೆ

ಇಲ್ಲೂ ಡ್ರಾ ಆದರೆ 10 ನಿಮಿಷಗಳ ಎರಡು ರ್ಯಾಪಿಡ್ ಪಂದ್ಯಗಳನ್ನು ಆಡಲಿದ್ದಾರೆ

ರ್ಯಾಪಿಡ್ ಗೇಮ್ ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್ ಆಡಲಾಗುತ್ತದೆ

ಹೀಗಾಗಿ ಇಂದಿನ ಪಂದ್ಯ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ