ಇವತ್ತು ನನ್ನ ಎಂಗೇಜ್‌ಮೆಂಟ್‌ ಆಯ್ತು; ಪೋಸ್ಟ್ ಹಂಚಿಕೊಂಡ ಒಳ್ಳೆ ಹುಡುಗ ಪ್ರಥಮ್‌

ತನ್ನನ್ನು ತಾನು ಒಳ್ಳೆ ಹುಡುಗ ಎಂದು ಕರೆದುಕೊಳ್ಳುತ್ತಿದ್ದ ಪ್ರಥಮ್‌ ಸೋಶಿಯಲ್​​ ಮೀಡಿಯಾದಲ್ಲಿ ಹೊಸ ಪೋಸ್ಟ್​​​ ಹಂಚಿಕೊಂಡಿದ್ದಾರೆ.

ಕನ್ನಡದ ಬಿಗ್​​ ಬಾಸ್​​ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿ, ಬಿಗ್​​ ಬಾಸ್​ ವಿನ್ನರ್​​​ ಪಟ್ಟವನ್ನು ಪಡೆದುಕೊಂಡಿದ್ದ ಪ್ರಥಮ್‌

ಇದೀಗಾ ಸದ್ದಿಲ್ಲದೇ ಎಂಗೇಜ್‌ಮೆಂಟ್‌ ಮಾಡಿಕೊಂಡಿರುವ ನಟ ಪ್ರಥಮ್‌

ಯಾವ ಆಡಂಬರ,ಸಂಭ್ರಮ,ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಎಂಗೇಜ್‌ಮೆಂಟ್‌ ಆಯ್ತು ಎಂದು ಬರೆದುಕೊಂಡಿದ್ದಾರೆ.

ಹರಸುವವರು ಅಲ್ಲಿಂದಲೇ ಹರಸಿ...ಅದೇ ಆಶೀರ್ವಾದ‌ ಎಂದು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಆದರೆ ಹುಡುಗಿ ಯಾರು ಎಂದು ಎಂಬುದನ್ನು ಪ್ರಥಮ್‌ ಬಹಿರಂಗ ಪಡಿಸಿಲ್ಲ.