ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ಗುರುವಾರ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆದಿದೆ.

ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಸಾವಿರಾರು ದೀಪಗಳಿಂದ ಸ್ವರ್ಗದಂತೆ ಅಲಂಕರಿಸಲಾಗಿತ್ತು.

ಗುಜರಾತಿನ ಸಾಂಪ್ರದಾಯಿಕ ಗೋಲ್ ಧನ ಆಚಾರದಂತೆ ನಿಶ್ಚಿತಾರ್ಥ ಜರುಗಿದ್ದು, ಕುಟುಂಬದ ಬಂಧು ಮಿತ್ರರೂ ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಇದೀಗಾ ರಾಧಿಕಾ ಮರ್ಚೆಂಟ್ ಧರಿಸಿದ್ದ ಗೋಲ್ಡನ್ ಮತ್ತು ಕೆನೆ ಬಣ್ಣದ ಲೆಹೆಂಗಾ ಚೋಲಿಯು ಸಾಕಷ್ಟು ಸುದ್ದಿಯಾಗಿದೆ.

ಭಾರತದ ಪ್ರಸಿದ್ದ ಕಾಸ್ಟೂಮ್ ಡಿಸೈನರ್ ಆಗಿರುವ ಅಬು ಜಾನಿ ಸಂದೀಪ್ ಖೋಸ್ಲಾ,  ರಾಧಿಕಾ ಧರಿಸಿದ್ದ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ.

ರಾಧಿಕಾ ವಜ್ರದ ಸರ ಹಾಗೂ ಕೈಯಲ್ಲಿ ವಜ್ರದ ಬಳೆ ಮತ್ತು ಮಾಂಗ್ ಟಿಕಾ ಧರಿಸಿ, ಸಂಪೂರ್ಣವಾಗಿ ವಜ್ರದಿಂದಲೇ ಮಿಂಚಿದ್ದಾರೆ.