ಬಾಯಲ್ಲಿ ನೀರೂರಿಸುವ ರಂಜಾನ್ ಹಬ್ಬದ ವಿಶೇಷ ಖಾದ್ಯಗಳು ಇಲ್ಲಿವೆ
ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರ ಮಾಸವಾಗಿದ್ದು, ಈ ಸಮಯದಲ್ಲಿ ಉಪವಾಸವನ್ನು ಮಾಡುತ್ತಾರೆ.
ಉಪವಾಸದ ಮಸ್ಸಂಜೆಯ ಸಮಯದಲ್ಲಿ ಪ್ರತೀ ದಿನ ವಿಶೇಷ ಆಹಾರಗಳನ್ನು ತಯಾರಿಸುತ್ತಾರೆ.
ಕೀಮಾ ಸಮೋಸ: ಮಟನ್ ಅಥವಾ ಚಿಕನ್ ಮಾಂಸ ಹಾಗೂ ಮಸಾಲೆ ಪದಾರ್ಥಗಳನ್ನು ಬಳಸಿ ಕೀಮಾ ಸಮೋಸವನ್ನು ತಯಾರಿಸಲಾಗುತ್ತದೆ.
ಶೀರ್ ಕುರ್ಮಾ : ಡ್ರೈ ಫ್ರೂಟ್ಸ್, ಹಾಲು, ಸಕ್ಕರೆ, ಏಲಕ್ಕಿ ಸೇರಿದಂತೆ ಅನೇಕ ಪದಾರ್ಥಗಳನ್ನು ಹಾಕಿ ಈ ಸಿಹಿ ಖಾದ್ಯ ತಯಾರಿಸಲಾಗುತ್ತದೆ.
ಮಟನ್ ನಿಹರಿ: ಭಾರತೀಯ ಮಸಾಲೆ ಪದಾರ್ಥಗಳನ್ನು ಬಳಸಿ ಈ ವಿಶೇಷ ಖಾದ್ಯವನ್ನು ಹಬ್ಬದ ಸಮಯದಲ್ಲಿ ತಯಾರಿಸಲಾಗುತ್ತದೆ.
ಜರ್ದಾ ಪುಲಾವ್: ಬಾಸ್ಮತಿ ಅಕ್ಕಿ, ಕೇಸರಿ ಮತ್ತು ಸಕ್ಕರೆಯೊಂದಿಗೆ ತಯಾರಿಸಿದ ಜನಪ್ರಿಯ ಹಬ್ಬದ ಖಾದ್ಯವಾಗಿದೆ.