ಮೊಳಕೆ ಕಾಳುಗಳನ್ನು ಹಸಿ ತಿನ್ನಬೇಕೋ, ಬೇಯಿಸಿ ತಿನ್ನಬೇಕೋ?

ಮೊಳಕೆ ಕಟ್ಟಿದ ಕಾಳುಗಳು ಫೈಬರ್, ವಿಟಮಿನ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ

ಹಸಿಯಾದ ಕಾಳುಗಳಲ್ಲಿ ಸಲ್ಮೋನೆಲ್ಲ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಸಂಶೋದನೆಗಳು ತಿಳಿಸಿವೆ

ಇದು ಫುಡ್ ಪಾಯಿಸನ್ ಗೆ ಕಾರಣವಾಗಬಹುದು

ಫುಡ್ ಪಾಯ್ಸನಿಂಗ್ ಆದರೆ, ವಾಂತಿ ಭೇದಿ ಹೊಟ್ಟೆ ಸೆಳೆತ ಇತ್ಯಾದಿ ಸಮಸ್ಯೆಗಳು ಕೇವಲ 12 ರಿಂದ 72 ಗಂಟೆಗಳ ಒಳಗೆ ಕಾಣಿಸುತ್ತದೆ

ಹಸಿ ಮೊಳಕೆ ಕಟ್ಟಿದ ಕಾಳುಗಳು ಜೀರ್ಣವಾಗುವುದು ಕಷ್ಟ

ಆದರೆ ಪ್ರತಿಯೊಬ್ಬರಿಗೂ ಹಸಿ ಮೊಳಕೆ ಕಾಲುಗಳಿಂದ ತೊಂದರೆಯಾಗಬಹುದು ಎಂದು ಹೇಳಲಾಗುವುದಿಲ್ಲ.

ಮೊಳಕೆ ಕಾಲುಗಳನ್ನು ಸೇವಿಸಲು ಉತ್ತಮ ವಿಧಾನವೆಂದರೆ: ಹುರಿದ ಮತ್ತು ಬೇಯಿಸಿ ಸೇವಿಸುವುದು 

ಈ ರೀತಿ ಮಾಡಿದಾಗ ಕಾಳುಗಳಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ