ರಿಲಾಯನ್ಸ್​ನಲ್ಲಿ ಮುಕೇಶ್ ಅಂಬಾನಿಗಿಂತಲೂ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ ಯಾರು?

11 September 2023

Pic Credit: Google

ಭಾರತದ ಅತಿದೊಡ್ಡ ಮಾರುಕಟ್ಟೆ ಮೌಲ್ಯದ ಕಂಪನಿ ಆರ್​ಐಎಲ್. ಇದರ ಮಾಲೀಕ ಮುಕೇಶ್ ಅಂಬಾನಿ ವಿಶ್ವದ ಅತಿ ಶ್ರೀಮಂತರಲ್ಲಿ ಒಬ್ಬರು.

ವಿಶ್ವಶ್ರೀಮಂತ ಅಂಬಾನಿ

Pic Credit: Google

ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಒಂದು. ಒಟ್ಟು 2.30 ಲಕ್ಷ ಉದ್ಯೋಗಿಗಳಿದ್ದಾರೆ.

2.3 ಲಕ್ಷ ಉದ್ಯೋಗಿಗಳು

Pic Credit: Google

ಮುಕೇಶ್ ಅಂಬಾನಿ ವಿಶ್ವ ಶ್ರೀಮಂತರೆನಿಸಿದರೂ ಅವರು ಪಡೆಯುವ ಸಂಬಳ ತೀರಾ ಹೆಚ್ಚಲ್ಲ. ಅವರಿಗಿಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿ ಇದ್ದಾರೆ.

ಅಂಬಾನಿಗಿಂತ ಹೆಚ್ಚು ಸಂಬಳ

Pic Credit: Google

ರಿಲಾಯನ್ಸ್ ಇಂಡಸ್ಟ್ರೀಸ್ ಬೋರ್ಡ್​ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ನಿಖಿಲ್ ಮೆಸ್ವಾನಿ ಅವರು ಅಂಬಾನಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ.

ನಿಖಿಲ್ ಮೆಸ್ವಾನಿಗೆ ಹೆಚ್ಚು ಸಂಬಳ

Pic Credit: Google

ನಿಖಿಲ್ ಮೆಸ್ವಾನಿ ಅವರ ತಂದೆ ರಸಿಕಲಾಲ್ ಮೆಸ್ವಾನಿ ರಿಲಾಯನ್ಸ್ ಇಂಡಸ್ಟ್ರೀಸ್​ನ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರು. ಮೆಸ್ವಾನಿ ಮತ್ತು ಅಂಬಾನಿ ಸಂಬಂಧಿಗಳು.

ನಿಖಿಲ್ ಅಪ್ಪ?

Pic Credit: Google

ಮುಕೇಶ್ ಅಂಬಾನಿ ಅವರ ಸೋದರಸಂಬಂಧಿ ನಿಖಿಲ್ ಮೆಸ್ವಾನಿ ಕೆಮಿಕಲ್ ಎಂಜಿನಿಯರ್ ಆಗಿದ್ದು 24 ಕೋಟಿ ರೂ ವಾರ್ಷಿಕ ಸಂಬಳ ಪಡೆಯುತ್ತಾರೆ.

24 ಕೋಟಿ ರೂ ಸಂಬಳ

Pic Credit: Google

ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಆದರೂ ಮುಕೇಶ್ ಅಂಬಾನಿ ಸಂಬಳ ವರ್ಷಕ್ಕೆ 15 ಕೋಟಿ ರೂ ಮಾತ್ರ. ಷೇರು ಆಸ್ತಿ ಮೂಲಕ ಶ್ರೀಮಂತ ಎನಿಸಿದ್ದಾರೆ.

ಅಂಬಾನಿಗೆ 15 ಕೋಟಿ ಸಂಬಳ

Pic Credit: Google

ಮುಕೇಶ್ ಅಂಬಾನಿ ಕೋವಿಡ್ ಬಳಿಕ ಸಂಬಳ ಪಡೆಯುವುದನ್ನು ನಿಲ್ಲಿಸಿದ್ದಾರೆ. ಮುಂದಿನ ಐದು ವರ್ಷವೂ ಸಂಬಳ ಇಲ್ಲದೇ ಕೆಲಸ ಮಾಡಲಿದ್ದಾರೆ.

ವರ್ಷಗಳಿಂದ ಸಂಬಳ ಇಲ್ಲ

Pic Credit: Google