ಇಂದು 250ನೇ ODI ಪಂದ್ಯ: ದಾಖಲೆ ಸೃಷ್ಟಿಸುವತ್ತ ರೋಹಿತ್ ಶರ್ಮಾ
17-09-2023
ಇಂದು ಏಷ್ಯಾಕಪ್ 2023 ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.
ಏಷ್ಯಾಕಪ್ ಫೈನಲ್
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೂತನ ದಾಖಲೆ ಸೃಷ್ಟಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ರೋಹಿತ್ ದಾಖಲೆ
ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 250ನೇ ಪಂದ್ಯ ಆಡಿದ ಆಟಗಾರನಾಗಲಿದ್ದಾರೆ.
250ನೇ ಪಂದ್ಯ
ಇಂದಿನ ಪಂದ್ಯದಲ್ಲಿ ಆಡುವ ಮೂಲಕ ಭಾರತ ಕ್ರಿಕೆಟ್ ತಂಡದ ಪರ 250 ಏಕದಿನ ಪಂದ್ಯಗಳನ್ನು ಆಡಿದ 9ನೇ ಕ್ರಿಕೆಟಿಗ ರೋಹಿತ್ ಶರ್ಮಾ ಆಗಲಿದ್ದಾರೆ.
9ನೇ ಕ್ರಿಕೆಟಿಗ
ಇಂದು ಹಿಟ್‌ಮ್ಯಾನ್ ಅವರು ಸಚಿನ್, ಧೋನಿ, ಕೊಹ್ಲಿ, ಯುವರಾಜ್ ಸಿಂಗ್ ಅವರಂತಹ ದಿಗ್ಗಜರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.
ದಿಗ್ಗಜರ ಸಾಲಿಗೆ ಸೇರ್ಪಡೆ
ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಇವರು 463 ODI ಕ್ರಿಕೆಟ್ ಆಡಿದ್ದಾರೆ.
ಸಚಿನ್ 463 ಪಂದ್ಯ
ರೋಹಿತ್ ಒಟ್ಟು 249 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 48ರ ಸರಾಸರಿಯಲ್ಲಿ 10031 ರನ್ ಗಳಿಸಿದ್ದಾರೆ. 30 ಶತಕ, 51 ಅರ್ಧ ಶತಕ ಗಳಿಸಿದ್ದಾರೆ.
ರೋಹಿತ್ ಏಕದಿನ ಪಂದ್ಯ
ಏಕದಿನದಲ್ಲಿ 200 ವಿಕೆಟ್ ಉರುಳಿಸಿದ ರವೀಂದ್ರ ಜಡೇಜಾ
ಇನ್ನಷ್ಟು ಓದಿ