ಭಾರತ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಭಾರತ238 ರನ್​​ಗಳ ಅಮೋಘ ಜಯ ಸಾಧಿಸಿತು.

ಕಳೆದ10 ವರ್ಷಗಳಿಂದ ತವರು ನೆಲದಲ್ಲಿ ಭಾರತವನ್ನು ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ.

ಆ ಮೂಲಕ ತವರಿನಲ್ಲಿ ಸತತ 15 ಸರಣಿ ಗೆದ್ದ ಏಕೈಕ ತಂಡವಾಗಿ ಭಾರತ ಇತಿಹಾಸ ನಿರ್ಮಿಸಿದೆ.

2ನೇ ಟೆಸ್ಟ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಭಾರತ ಕೊನೆಯದಾಗಿ2012ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ತವರು ನೆಲದಲ್ಲಿ ಸೋತಿತ್ತು.

ರೋಹಿತ್ ಪರಿಪೂರ್ಣ ನಾಯಕನಾಗಿ ಭಾರತ ಈ ವರ್ಷ ಆಡಿದ ಎಲ್ಲ ಪಂದ್ಯಗಳಲ್ಲಿ ವೈಟ್​​ವಾಷ್ ಮಾಡಿದೆ