ಕೊರೊನಾ ಪ್ರಕರಣಗಳ ಹೆಚ್ಚಳದ ನಡುವೆ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ನಟರು

ಇದರ ನಡುವೆ ಹಲವು ಕನ್ನಡ ನಟರು ತಾವೆ ಲಸಿಕೆ ಹಾಕಿಸಿಕೊಂಡು ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ

ಆ ಪಟ್ಟಿಗೆ ಇತ್ತೀಚೆಗೆ ಸೇರಿಕೊಂಡವರು ನಟಿ ರಾಗಿಣಿ ದ್ವಿವೇದಿ ಮತ್ತು ನಟ ಕಾರ್ತಿಕ್ ಜೈರಾಮ್

ಇವರು ಇಬ್ಬರು ಮಂಗಳವಾರ ಲಸಿಕೆ ಹಾಕಿಸಿಕೊಂಡು, ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ವಿನಂತಿಸಿದ್ದಾರೆ

ಲಸಿಕೆ ಹಾಕಿಸಿಕೊಂಡು, ಈ ನಟರು ತಮ್ಮ ಸಾಮಾಜಿಕ ಮಾದ್ಯಮಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ

ಈಗಾಗಲೆ, ಹಲವು 45 ಕ್ಕಿಂತ ಹೆಚ್ಚು ವರ್ಷದ ಕನ್ನಡದ ನಟರು ಲಸಿಕೆ ಹಾಕಿಸಿಕೊಂಡಿದ್ದಾರೆ