ಶೂಟಿಂಗ್ ವೇಳೆ ಅವಘಡ; ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ಶೂಟಿಂಗ್ ವೇಳೆ ಶಾರುಖ್​​​​ ಖಾನ್ ಮೂಗಿನ ಮೇಲೆ ಬಲವಾದ ಪೆಟ್ಟು ಬಿದ್ದಿದೆ.

ಬಳಿಕ ಮೂಗಿನ ಸಣ್ಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಸುದ್ದಿ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಕಿಂಗ್ ಖಾನ್ ಅಭಿಮಾನಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ

ವರದಿಗಳ ಪ್ರಕಾರ ಚಿಕಿತ್ಸೆಯ ಬಳಿಕ ಶಾರುಖ್​​​​​​​ ಭಾರತಕ್ಕೆ ಮರಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪಠಾಣ್​​​ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಕಿಂಗ್ ಖಾನ್

‘ಪಠಾಣ್’ ಸಿನಿಮಾದ ಸಕ್ಸಸ್ ನಂತರ ಜವಾನ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಲ್ಲಿರುವ ಅಭಿಮಾನಿಗಳು.

ಸದ್ಯ ಈ ಅವಘಡ ಶಾರುಖ್ ಖಾನ್ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.