ಪುರಿಯ ಶ್ರೀ ಜಗನ್ನಾಥ ದೇವಾಲಯದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ

ಪುರಿಯ ಶ್ರೀ ಜಗನ್ನಾಥ ದೇವಾಲಯವು ಭಾರತದ ಪೂರ್ವ ಕರಾವಳಿಯ ಒಡಿಶಾದಲ್ಲಿದೆ.

ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯದ ಕೆಲವೊಂದಿಷ್ಟು ವೈಶಿಷ್ಟ್ಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ.

ಇಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಹಾಗೂ ರಥಯಾತ್ರೆಯಲ್ಲಿ ಜನಸಾಗರವೇ ಹರಿದು ಬರುವುದನ್ನು ಕಾಣಬಹುದು.

ಈ ಪವಿತ್ರ ದೇವಾಲಯದ ಮೇಲೆ ಇರುವ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ.

ಎಷ್ಟೇ ಬಿಸಿಲಿದ್ದರೂ ಕೂಡ ಈ ದೇವಾಲಯದ ಒಳಗೆ ಹಾಗೂ ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ.

ಇಲ್ಲಿನ ಪ್ರಸಾದವನ್ನು ತಯಾರಿಸುವಾಗ ಒಂದರ ಮೇಲೊಂದರಲ್ಲಿ 7 ಮಡಿಕೆಗಳನ್ನು ಇಟ್ಟು ಪ್ರಸಾದ ಬೇಯಿಸಲಾಗುತ್ತದೆ.

ದೇವಾಲಯದ ಹತ್ತಿರವೇ ಸಮುದ್ರವಿದ್ದರೂ ಕೂಡ ದೇವಾಲಯದ ಪ್ರವೇಶದ್ವಾರದಿಂದ ಒಳಗೆ ಹೋದಾಗ ಯಾವುದೇ ಶಬ್ದ ಕೇಳುವುದಿಲ್ಲ.

ದೇವಾಲಯದ ಮೇಲ್ಭಾಗದಲ್ಲಿರುವ ಸುದರ್ಶನ ಚಕ್ರವನ್ನು ಪುರಿ ನಗರದ ಎಲ್ಲಾ ಕಡೆಗಳಿಂದ ನೋಡಿದರೂ ನಿಮ್ಮೆಡೆಗೆ ಇರುವಂತೆ ತೋರುತ್ತದೆ.