ಕೃಷ್ಣನಾಡು ಉಡುಪಿಯಲ್ಲಿ ಕೃಷ್ಣ ‌ಜನ್ಮಾಷ್ಟಮಿ ಸಂಭ್ರಮ

06 Augest 2023

ಶ್ರೀ  ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಕಟ್ಟಿದೆ. ಪರ್ಯಾಯ ಶ್ರೀ ಕೃಷ್ಣಾಪುರ ಮಠದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. 

ಶ್ರೀ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಇಂದು ಮಧ್ಯರಾತ್ರಿ ಶ್ರೀ ಕೃಷ್ಣನ ಜನನದ ಸಂಭ್ರಮಾಚರಣೆ ನಡೆಯಲಿದೆ. ಕೃಷ್ಣಾಪುರ ಶ್ರೀಗಳು ಮಧ್ಯರಾತ್ರಿ ಅರ್ಗ್ಯಪ್ರಧಾನ ಮಾಡಲಿದ್ದಾರೆ.

ಮಧ್ಯರಾತ್ರಿ ಶ್ರೀ ಕೃಷ್ಣನ ಜನನದ ಸಂಭ್ರಮ

ಇಂದು ಮತ್ತು ನಾಳೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಲಸಾಗಿದೆ.

ಇಂದು ಮತ್ತು ನಾಳೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಆಚಾರ್ಯ ಮಧ್ವರಿಂದ ಪ್ರತಿಷ್ಠಾಪಿಸಲ್ಪಟ್ಟ ಉಡುಪಿಯ ಕಡಗೋಲ ಕೃಷ್ಣನ ಆರಾಧನೆಗೆ ಇದು ಪರ್ವಕಾಲ. 

ಮಧ್ವರಿಂದ ಪ್ರತಿಷ್ಠಾಪಿಸಲ್ಪಟ್ಟ ಮಠ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಸೆಪ್ಟೆಂಬರ್‌ 1ರಿಂದ 8 ರವರೆಗೆ ಅಷ್ಟದಿನೋತ್ಸವ ಕಾರ್ಯಕ್ರಮ ನಡೆಯುತ್ತಿದೆ‌‌‌‌‌. 

 ಸೆಪ್ಟೆಂಬರ್‌ 1ರಿಂದ 8 ರವರೆಗೆ ಅಷ್ಟದಿನೋತ್ಸವ 

ಸೆಪ್ಟೆಂಬರ್‌ 7 ರಂದು ನಡೆಯುವ ವಿಟ್ಲ ಪಿಂಡಿ ಉತ್ಸವದಂದು ಗೊಲ್ಲರು ಮೊಸರು ಕುಡಿಕೆಗಳನ್ನು ಒಡೆಯಲಿದ್ದಾರೆ. 

ವಿಟ್ಲ ಪಿಂಡಿ ಉತ್ಸವ

ವಿಟ್ಲ ಪಿಂಡಿಯಂದು ಏಕಾದಶಿ ವೃತ, ನಿರ್ಜಲ ಉಪವಾಸ ಇರುವುದರಿಂದ ಕೃಷ್ಣನಿಗೆ ಬೇಗನೇ ಪೂಜೆಗಳನ್ನು ಮಾಡಲಾಗುತ್ತದೆ. 

 ಏಕಾದಶಿ ವೃತ, ನಿರ್ಜಲ ಉಪವಾಸ 

ಉಡುಪಿ ಅಷ್ಟಮಿಯ ಪ್ರಸಿದ್ಧ ಹುಲಿವೇಷ ಕುಣಿತ ಪ್ರದರ್ಶಿಸಲು ಹುಲಿವೇಷ ತಂಡಗಳು ಸಜ್ಜಾಗಿದೆ. 

ಹುಲಿವೇಷ ಕುಣಿತ 

ದೇವರ ವಿಶೇಷವಾಗಿ ತಯಾರಿಸಿದ ಶ್ರೀಕೃಷ್ಣನ ಜೇಡಿಮಣ್ಣಿನ ವಿಗ್ರಹಕ್ಕೆ ಹಾಲು ಮತ್ತು ನೀರನ್ನು ಅರ್ಪಿಸುವುದು. ಈ ವಿಶೇಷ ಆಚರಣೆಯು ಮಧ್ಯರಾತ್ರಿಯಲ್ಲಿ ನಡೆಯುತ್ತದೆ. 

ಶ್ರೀಕೃಷ್ಣನ ಜೇಡಿಮಣ್ಣಿನ ವಿಗ್ರಹ