ಶಾಕಿಂಗ್: ಯೋ-ಯೋ ಟೆಸ್ಟ್'ನಲ್ಲಿ ಕೊಹ್ಲಿಯನ್ನು ಮೀರಿಸಿದ ಗಿಲ್

ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ 2023 ಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ

ಬೆಂಗಳೂರು ಸಮೀಪದ ಆಲೂರಿನಲ್ಲಿ ಭಾರತ ತಂಡ ಶಿಬಿರವನ್ನು ನಡೆಸುತ್ತಿದೆ

ಏಷ್ಯಾಕಪ್'ಗಾಗಿ ಭಾರತದ ಆಟಗಾರರು ಕಡ್ಡಾಯವಾಗಿ ಯೋ-ಯೋ ಪರೀಕ್ಷೆಗೆ ಒಳಗಾಗುತ್ತಿದ್ದಾರೆ

ಇದೀಗ ಯೋ-ಯೋ ಟೆಸ್ಟ್'ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದು ಯಾರೆಂದು ತಿಳಿದುಬಂದಿದೆ

ಕೊಹ್ಲಿ, ಪಾಂಡ್ಯ ಅವರನ್ನು ಮೀರಿಸಿ ಗಿಲ್ ಯೋ-ಯೋ ಟೆಸ್ಟ್'ನಲ್ಲಿ ಟಾಪರ್‌ ಆಗಿದ್ದಾರೆ

ಗಿಲ್ 18.7 ಸ್ಕೋರ್ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಆಟಗಾರನಾಗಿದ್ದಾರೆ

ಭಾರತದ ಹೆಚ್ಚಿನ ಆಟಗಾರರು 16.5 ಮತ್ತು 18 ರ ನಡುವೆ ಸ್ಕೋರ್ ಮಾಡಿದ್ದಾರೆ

ಯೋ ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಲು ಕನಿಷ್ಠ ಸ್ಕೋರ್ 16.5 ಆಗಿದೆ