ದಿ ಕೇರಳ ಸ್ಟೋರಿ ಸಿನಿಮಾದ ಗುಳಿಕೆನ್ನೆ ಬೆಡಗಿ ಸಿದ್ಧಿ ಇದ್ನಾನಿ

ದಿ ಕೇರಳ ಸ್ಟೋರಿ ಸಿನಿಮಾದ ಗೀತಾಂಜಲಿ ಪಾತ್ರಧಾರಿ ಸಿದ್ಧಿ ಇದ್ನಾನಿ

ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’ ಬಾಕ್ಸ್ ಆಫೀಸ್​ನಲ್ಲಿ ಬಾರೀ ಸದ್ದು ಮಾಡುತ್ತಿದೆ.

ಈ ಸಿನಿಮಾದಲ್ಲಿ ನಟಿ ಅದಾ ಶರ್ಮನಷ್ಟೇ ಜನಮೆಚ್ಚುಗೆ ಪಡೆದ ಮತ್ತೊರ್ವ ನಟಿ ಗುಳಿಕೆನ್ನೆ ಬೆಡಗಿ ಸಿದ್ಧಿ ಇದ್ನಾನಿ.

ಇದೀಗಾ ಸಿದ್ಧಿ ಇದ್ನಾನಿ ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

ಸಿದ್ಧಿ ಇದ್ನಾನಿ ಗುಜರಾತಿ ಚಿತ್ರ ಗ್ರ್ಯಾಂಡ್ ಹ್ಯಾಲಿ (2016) ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

2018 ರಲ್ಲಿ, ಸಿದ್ಧಿ 'ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್' ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.

ಇದಾದ ಬಳಿಕ ಪ್ಯಾರಿಸ್​​ನಲ್ಲಿ ನಡೆದ ಮಿಸ್​​ ಸೂಪರ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.