ಮಲಬದ್ದತೆ ನಿವಾರಣೆಗೆ ಸರಳ ಮನೆಮದ್ದು

ಧಾನ್ಯಗಳು, ಮಸೂರ, ಓಟ್ಸ್, ಹಣ್ಣುಗಳು ಬೀನ್ಸ್ ಮುಂತಾದ ಫೈಬರ್ ಸಮೃದ್ಧ ಆಹಾರ ಸೇವಿಸಿ.

ಹಸಿರು ತರಕಾರಿಗಳು, ಧಾನ್ಯಗಳಂತಹ ಮೆಗ್ನಿಸಿಯಮ್ ಸಮೃದ್ಧ ಆಹಾರ ಸೇವನೆ ಮಾಡಿ.

ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆ ತೊಡೆದುಹಾಕಲು ಸಾಕಷ್ಟು ನೀರು ಕುಡಿಯಿರಿ.

ವ್ಯಾಯಾಮ ಕರುಳಿನ ಚಲನೆಗೆ ಸಹಾಯಕವಾಗಿದೆ, ಇದನ್ನು ನಿತ್ಯ ಅಭ್ಯಾಸ ಮಾಡಿ.

ಜೀರ್ಣಕ್ರಿಯೆ ಉತ್ತೇಜಿಸುವ ಕಾಫಿ ಮಲಬದ್ಧತೆ ತೊಡೆದುಹಾಕಲು ಪ್ರಯೋಜನಕಾರಿ.

ನಿಂಬೆ ನೀರನ್ನು ಸೇವಿಸಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಸುತ್ತದೆ.

ಸೂಚನೆ

ಈ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಅಷ್ಟೆ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.