ಒತ್ತಡದ ಜೀವನಶೈಲಿಯಲ್ಲಿ ನಿಮ್ಮ ಬೆನ್ನು ಬಾಗಿದೆಯೇ? ಹಾಗಿದ್ದರೆ ಈ ಭಂಗಿ ಅಭ್ಯಾಸಿಸಿ

ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲೇ ಬೆನ್ನು ಬಾಗಿರುವ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ.

ಇದು ಆರೋಗ್ಯದ ಜೊತೆಗೆ ನಿಮ್ಮ ದೈಹಿಕ ಆಕರ್ಷಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆದ್ದರಿಂದ ಇಲ್ಲಿ ತಿಳಿಸಲಾಗಿರುವ ಯೋಗ ಭಂಗಿಗಳನ್ನು ನಿಮ್ಮ ದಿನಚರಿಯಲ್ಲಿ ರೂಢಿಸಿ, ಫಿಟ್​​ ಆಗಿರಿ.

ತಾಡಾಸನ: ಈ ಪರ್ವತ ಭಂಗಿ ಪ್ರತೀ ದಿನ ಅಭ್ಯಾಸಿಸುವುದರಿಂದ ಬೆನ್ನು ಮತ್ತು ಕುತ್ತಿಗೆ ನೇರವಾಗುತ್ತದೆ. 

ಸುಖಾಸನ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯದ ಜೊತೆಗೆ ಬೆನ್ನು ಮೂಳೆಗೂ ಒಳ್ಳೆಯದು.

ಮತ್ಸ್ಯಾಸನ ಅಭ್ಯಾಸದಿಂದ ಕುತ್ತಿಗೆ, ಹೊಟ್ಟೆ ಮತ್ತು ಅನೇಕ ವಿಕಾರಗಳು ದೂರವಾಗುವುವು.

ಉಷ್ಟ್ರಾಸನ: ಈ ಒಂಟೆ ಭಂಗಿ ಬಾಗಿರುವ ಬೆನ್ನನ್ನು ಸರಿ ಪಡಿಸುವಲ್ಲಿ ಸಹಾಯಕವಾಗಿದೆ.

ಬೆಕ್ಕು-ಹಸು ಭಂಗಿ: ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.